ಶ್ರೀ ಸ್ವಾಮಿ ಪುರುಷೋತ್ತಮಾನಂದಜೀ ಕನ್ನಡ ಸಾಹಿತ್ಯಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ

ಶ್ರೀ ಸ್ವಾಮಿ ಪುರುಷೋತ್ತಮಾನಂದಜೀ ಕನ್ನಡ ಸಾಹಿತ್ಯಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ

ರಾಣೇಬೆನ್ನೂರಿನ ಸತ್ಸಂಗ ಕಾರ್ಯಕ್ರಮದಲ್ಲಿ ಡಾ. ಚಂದ್ರಶೇಖರ ಕೇಲಗಾರ

ರಾಣೇಬೆನ್ನೂರು, ಜೂ.18- ಶ್ರೀ ಸ್ವಾಮಿ ಪುರುಷೋತ್ತಮಾನಂದಜೀ  ಅವರು,  ವಿದ್ಯಾರ್ಥಿಗೊಂದು ಪತ್ರ, ಅಧ್ಯಾತ್ಮದಲ್ಲಿ ಏಕಾಗ್ರತೆ, ಧೀರತೆಯ ದುಂದುಬಿ, ಕಬೀರ ಬೀರಿದ ಬೆಳಕು, ತಪಸ್ಸು ಯಶಸ್ಸು ಮುಂತಾದ ಕೃತಿಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ ಎಂದು ಡಾ. ಚಂದ್ರಶೇಖರ ಕೇಲಗಾರ ಹೇಳಿದರು.

ಅವರು ಇಲ್ಲಿನ ರಾಜರಾಜೇಶ್ವರಿ ನಗರದ ಶ್ರೀ ಮಾತಾ ಸತ್ಸಂಗ ಕೇಂದ್ರದಲ್ಲಿ  ನಡೆದ ಸ್ವಾಮಿ ಪುರುಷೋತ್ತಮಾನಂದಜೀ ಜಯಂತಿ ಕಾರ್ಯಕ್ರಮದಲ್ಲಿ  ಉಪನ್ಯಾಸ ನೀಡುತ್ತಿದ್ದರು.

ಶ್ರೀಗಳು ರಚಿಸಿದ ಸಾಹಿತ್ಯ ಯುವಶಕ್ತಿಗೆ ಬಹಳಷ್ಟು ಉಪಯುಕ್ತ ವಾದುದಾಗಿದೆ. ಪಾಲಕರು ತಮ್ಮ ಮಕ್ಕಳಿಗೆ ಅವರ ಸಾಹಿತ್ಯವನ್ನು ಓದಲು ಪ್ರೇರೇಪಿಸಬೇಕು.  ರಾಜ್ಯಾದ್ಯಂತ ಅನೇಕ ಸತ್ಸಂಗ ಕೇಂದ್ರ ಹಾಗೂ ರಾಮಕೃಷ್ಣಾಶ್ರಮ  ಶಾಖೆಗಳ ಹುಟ್ಟಿಗೆ ಶ್ರೀ ಪುರುಷೋತ್ತಮಾನಂದ ಶ್ರೀಗಳು ಕಾರಣರಾಗಿದ್ದಾರೆ ಎಂದು ಡಾ. ಕೇಲಗಾರ ಹೇಳಿದರು.

ಪುರುಷೋತ್ತಮಾನಂದ ಶ್ರೀಗಳು ಕೇವಲ ಅಧ್ಯಾತ್ಮಿಕ ಬೋಧನೆಗೆ ಸೀಮಿತರಾಗಿರಲಿಲ್ಲ. ಸಾಹಿತ್ಯ ಅರಿಯದವರಿಗೆ ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿಸಿದರು. ಎಲ್ಲ ಜಾತಿ, ಧರ್ಮದ ಜನರು ಅವರ ಉಪನ್ಯಾಸಕ್ಕೆ ಮಾರುಹೋಗಿದ್ದರು. ಅಂತಹ ಅದ್ಭುತ ಶಕ್ತಿ ಅವರಿಗಿತ್ತು ಎಂದು ರಾಮಕೃಷ್ಣಾಶ್ರಮದ ಪ್ರಕಾಶಾನಂದ ಮಹಾರಾಜರು ನುಡಿದರು.

ಭಗವನ್ನಾಮ ಸಂಕೀರ್ತನೆ, ಮಂಗಳಾರತಿ ಕಾರ್ಯಕ್ರಮಗಳು. ಜಿ.ಎಸ್.ಮುಂಡರಗಿ, ಎಸ್.ಟಿ. ತಾವರಗೇರಿ, ಕಲ್ಲೇಶ, ಪಾಂಡುರಂಗ, ಪ್ರಶಾಂತ, ಸಾವಂತ್ರಮ್ಮ, ಸುವರ್ಣಮ್ಮ,‍ ಕಸ್ತೂರಮ್ಮ, ರಶ್ಮಿ ಇದ್ದರು. ಸ್ವಾಮಿ ಆತ್ಮದೀಪಾನಂದ ಶ್ರೀಗಳು ಉಪಸ್ಥಿತರಿದ್ದರು.

error: Content is protected !!