ಒತ್ತಡ ನಿವಾರಣೆಗೆ ಔಷಧಿ ರಹಿತ ಮದ್ದು `ಯೋಗ’

ಒತ್ತಡ ನಿವಾರಣೆಗೆ ಔಷಧಿ ರಹಿತ ಮದ್ದು `ಯೋಗ’

ಅಂತರರಾಷ್ಟ್ರೀಯ ಯೋಗ ಗುರು ಗೀತಮ್ಮಾಜೀ

ದಾವಣಗೆರೆ, ಜೂ. 18- ನಗರದ ವಿಜ್ಞಾನ ಅಕಾಡೆಮಿಯಲ್ಲಿ ಅಂತರರಾಷ್ಟ್ರೀಯ ಯೋಗ ಗುರು, ಸಮಾಜ ಸೇವಕರಾದ ಗೀತಮ್ಮಾಜೀ ಅವರು ವಿದ್ಯಾರ್ಥಿಗಳಲ್ಲಿ ಒತ್ತಡ ನಿವಾರಣೆಗೆ ಯೋಗ ಮುದ್ರಾ ಪ್ರಾಣಾಯಾಮ ಅತ್ಯಂತ ಅವಶ್ಯಕ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿದ್ದಾರೆ, ಮನೋರೋಗಕ್ಕೆ ಮದ್ದಿಲ್ಲ, ಉತ್ತಮ ಆರೋಗ್ಯಕ್ಕೆ  ನೀರು – ನಾರು – ನಿದ್ದೆ ಅತ್ಯಂತ ಅವಶ್ಯಕ ಇವುಗಳಲ್ಲಿ ವ್ಯತ್ಯಾಸ ಆದಾಗ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗುತ್ತಾನೆ. 

ವಿದ್ಯಾರ್ಥಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಲಬದ್ಧತೆ ಯಿಂದ ನರಳುತ್ತಿದ್ದಾರೆ ಇದರಿಂದ ಮಾನಸಿಕ ಒತ್ತಡ ಹೆಚ್ಚಾಗಿ ಏಕಾಗ್ರತೆ, ನೆನಪಿನ ಶಕ್ತಿಯ ಕೊರತೆ ಉಂಟಾಗುತ್ತಿದೆ. ಇದರ ನಿವಾರಣೆಗೆ ಸುಲಭವಾಗಿ, ಕಡಿಮೆ ಸಮಯದಲ್ಲಿ ಅಭ್ಯಾಸ ಮಾಡಬಹುದಾದ, ಔಷಧಿ ರಹಿತ ಚಿಕಿತ್ಸಾ ಕ್ರಮಗಳಾದ  ಯೋಗಾಸನ, ಮುದ್ರಾ ಪ್ರಾಣಾಯಾಮ, ಓಂಕಾರ ಧ್ಯಾನ, ಆಕ್ಯುಪ್ರೆಶರ್ ಚಿಕಿತ್ಸೆಯ ಪರಿಣಾಮಕಾರಿ ವಿಧಾನಗಳನ್ನು ಪ್ರಾಯೋಗಿಕ ತರಬೇತಿ ನೀಡಿದರು, ತರಬೇತಿ ಸ್ಥಳದಲ್ಲಿಯೇ ಅದರ ಪ್ರಯೋಜನ, ಲಾಭಗಳನ್ನು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳ ಮೂಲಕ ತಿಳಿಸಿದರು.

ಪ್ರಾಂಶುಪಾಲ ಚಂದ್ರಶೇಖರ್  ಮತ್ತು ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

error: Content is protected !!