ಕಂದಗಲ್ಲು ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ಕಲಹ: ನೂರು ಅಡಿಕೆ ಮರಗಳು ಬಲಿ

ಕಂದಗಲ್ಲು ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ಕಲಹ: ನೂರು ಅಡಿಕೆ ಮರಗಳು ಬಲಿ

ದಾವಣಗೆರೆ, ಜೂ. 18-  ಆಸ್ತಿ ವಿಚಾರದ ಕಲಹಕ್ಕೆ ಸುಮಾರು ನೂರು ಫಲಕ್ಕೆ ಬಂದಿದ್ದ ಅಡಿಕೆ ಮರಗಳು ಬಲಿಯಾದ ಘಟನೆ ತಾಲ್ಲೂಕಿನ ಕಂದಗಲ್ಲು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕೆ.ಪಿ. ಮಂಜಪ್ಪ, ಜಗದೀಶ್, ಹಾಲೇಶ್, ಕೆ.ಪಿ. ರಾಜಪ್ಪ ಹಾಗೂ ಮತ್ತಿಬ್ಬರು ಸೇರಿದಂತೆ, ಆರು ಜನರ ಮೇಲೆ ಶ್ರೀಮತಿ ಬಿ.ಎಂ. ಪುಷ್ಪ ಹದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸರ್ವೆ ನಂಬರ್ 94/7ರಲ್ಲಿನ ಜಮೀನು ಅಳತೆ ಮಾಡಿದಾಗ 18 ಗುಂಟೆ ಜಮೀನು ನಮಗೆ ಹೆಚ್ಚಾಗಿ ಬಂದಿತ್ತು. ಅದನ್ನೇ ನೆಪವಾಗಿಟ್ಟುಕೊಂಡು ನನ್ನ ಗಂಡ ಗುರುಮೂರ್ತಿ ಹಾಗೂ ಮಕ್ಕಳಿಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದರು. ಇದೀಗ ಹತ್ತು ವರ್ಷದ 100 ಅಡಿಕೆ ಸಸಿಗಳನ್ನು ಕಳೆದ ಜೂ.16 ಶುಕ್ರವಾರ ಕಡಿದು ಹಾಕಿದ್ದಾರೆ. ಇದರ ಅಂದಾಜು ಮೌಲ್ಯ ಸುಮಾರು 10 ಲಕ್ಷದಷ್ಟಿರುತ್ತದೆ. ಅಲ್ಲದೆ ಅದನ್ನು ತಡೆಯಲು ಹೋದ ನಮ್ಮ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

error: Content is protected !!