ಅಭಿರುಚಿ, ಆಸಕ್ತಿಗಳು ಜೀವನದಲ್ಲಿ ಯಶಸ್ಸು ತರುತ್ತವೆ

ಅಭಿರುಚಿ, ಆಸಕ್ತಿಗಳು ಜೀವನದಲ್ಲಿ ಯಶಸ್ಸು ತರುತ್ತವೆ

ಭದ್ರಾ ಪದವಿ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಹೆಚ್. ಕೆ. ಲಿಂಗರಾಜು

ದಾವಣಗೆರೆ,ಜೂ.18- ಭದ್ರಾ ಪದವಿ ಕಾಲೇಜು ಹಾಗೂ ಭದ್ರಾ ಸ್ನಾತಕೋತ್ತರ ಕೇಂದ್ರದ ವಾರ್ಷಿಕೋತ್ಸವ ಹಾಗೂ  ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭವು ನಗರದ ಕನ್ನಡ ಕುವೆಂಪು ಭವನದಲ್ಲಿ ಮೊನ್ನೆ  ನಡೆಯಿತು. 

 ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಿಕ್ಷಣ ಇಲಾಖೆ,  ನಿವೃತ್ತ ಜಂಟಿ ನಿರ್ದೇಶಕ ಹೆಚ್.ಕೆ. ಲಿಂಗರಾಜು  ಮಾತನಾಡಿ, ವಿದ್ಯಾಸಂಸ್ಥೆಗಳ ತವರೂರಾಗಿ ಬೆಳೆಯು ತ್ತಿರುವ ದಾವಣಗೆರೆಯಲ್ಲಿ ಭದ್ರಾ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡುವಲ್ಲಿ ಯಶಸ್ವಿಯ ಹೆಜ್ಜೆಯನ್ನು ಇಡುತ್ತಿದೆ.  ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗಿ ಬೆಳೆಯುತ್ತಿರುವ ಭಾರತದಲ್ಲಿ ಯುವ ವಿದ್ಯಾರ್ಥಿಗಳ ಪಾತ್ರ ದೊಡ್ಡದಾಗಿದೆ ಎಂದರು.

ಪರಿಶ್ರಮವಿಲ್ಲದೆ ಯಶಸ್ಸು ಗಳಿಸಲು ಅಸಾಧ್ಯ. ಹಾಗಾಗಿ ತಮ್ಮ ಉತ್ತಮ ಭವಿಷ್ಯದ ಬಗ್ಗೆ ಕನಸು ಕಾಣಬೇಕು. ಆ ಕನಸುಗಳನ್ನು ಹುಡುಕಿ, ಅರಸಿಕೊಂಡು ಹೋಗಬೇಕು, ಗುರಿಗಳನ್ನು ತಲುಪಬೇಕು. ನಿಮ್ಮೊಳಗಿನ ಜ್ಞಾನ, ಕೌಶಲ್ಯ, ಅಭಿರುಚಿ, ಆಸಕ್ತಿಗಳು ನಿಮ್ಮ ಜೀವನದಲ್ಲಿ ಯಶಸ್ಸು ತಂದುಕೊಡುತ್ತವೆ.  ಯುವಕರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಸಾಧನೆಯ ಹಾದಿಯಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆ ಇರಬೇಕು. ನಡೆ-ನುಡಿ ಸಂಸ್ಕೃತಿ, ಪರಂಪರೆಯಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಇವುಗಳನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಯುವ ವಿದ್ಯಾರ್ಥಿಗಳ ಮೇಲಿದೆ  ಎಂದು ಲಿಂಗರಾಜು ಹೇಳಿದರು.

ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಮತ್ತು ಕಾಲೇಜು ಅಧ್ಯಾಪಕರ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷ  ಪ್ರೊ. ಸಿ. ಹೆಚ್. ಮುರಿಗೇಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸೃಜನಶೀಲ ಮನೋಭಾವನೆ ಅತ್ಯವಶ್ಯಕ.    ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗುವುದನ್ನು ಬಿಟ್ಟು, ಅವುಗಳಿಂದ ಹೊರ ಬಂದು ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳಬೇಕು. ಪ್ರತಿದಿನ ದಿನ ಪತ್ರಿಕೆಗಳನ್ನು, ನಿಯತಕಾಲಿಕೆಗಳನ್ನು ಓದುವುದರ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಬೇಕು ಎಂದು ಕರೆ ನೀಡಿದರು. 

ಪ್ರಾಂಶುಪಾಲ ಪ್ರೊ. ಟಿ. ಮುರುಗೇಶ್  ಅಧ್ಯಕ್ಷತೆ ವಹಿಸಿದ್ದರು.    ಮ್ಯಾನೇಜಿಗ್ ಟ್ರಸ್ಟಿ ಎಂ.ಸಂಕೇತ್  ಉಪಸ್ಥಿತರಿದ್ದರು.

ವಿದ್ಯಾರ್ಥಿನಿ  ಕು. ಸಂಜಯ್‌ಕುಮಾರ್ ಸ್ವಾಗತಿ ಸಿದರೆ, ಉಪನ್ಯಾಸಕ   ಬಸವನಗೌಡ ಆರ್ .ಕೆ., ವಾರ್ಷಿಕ ವರದಿ ಓದಿದರು,  ಕು. ಕಾವ್ಯ ಕೆ. ಆರ್. ಮತ್ತು ಪೂರ್ಣಿಮ ವಿ. ವೈ. ನಿರೂಪಿಸಿ ದರು. ಕು. ರಂಜಿತಾ ಎನ್. ಆರ್. ವಂದಿಸಿದರು.

error: Content is protected !!