ವಿಶ್ವಕರ್ಮ ಸಮುದಾಯಕ್ಕೆ ಅಗತ್ಯ ಸೌಲಭ್ಯ : ಶಾಸಕ ಬಿ.ಪಿ. ಹರೀಶ್‌

ವಿಶ್ವಕರ್ಮ ಸಮುದಾಯಕ್ಕೆ ಅಗತ್ಯ ಸೌಲಭ್ಯ : ಶಾಸಕ ಬಿ.ಪಿ. ಹರೀಶ್‌

ಮಲೇಬೆನ್ನೂರಿನ ಶ್ರೀ ಕಾಳಿಕಾದೇವಿ ದೇವಸ್ಥಾನದ  ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದವರ ಏಳಿಗೆಗೆ ಸರ್ಕಾರ ಗಮನಹರಿಸಬೇಕು : ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಒತ್ತಾಯ

ಮಲೇಬೆನ್ನೂರು, ಜೂ. 13- ವಿಶ್ವಕರ್ಮ ಸಮಾಜದ ಬಂಧುಗಳು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಅರಕಲಗೋಡು ತಾಲ್ಲೂಕಿನ ಅರೆಮಾದನಹಳ್ಳಿಯ ಸುಜ್ಞಾನ ಮಹಾಸಂಸ್ಥಾನ ಮಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಕರೆ ನೀಡಿದರು.

ಅವರು ಮಂಗಳವಾರ ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಮಂಡಲಪೂಜೆ ಹಾಗೂ ದೃಢಕಳಸ ಪೂಜೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.

ಕುಟುಂಬದಲ್ಲಿ ಒಬ್ಬರು ವೃತ್ತಿ ಮಾಡಿದರೆ, ಉಳಿದವರನ್ನು ಚನ್ನಾಗಿ ಓದಿಸಿ ಎಂದ ಶ್ರೀಗಳು, ನಾವು ಸಂಘಟಿತರಾಗಿದ್ದರೆ ಮಾತ್ರ ಸರ್ಕಾರಗಳು ನಮ್ಮ ಕಡೆ ತಿರುಗಿ ನೋಡುತ್ತವೆ. ಈ ಬಗ್ಗೆಯೂ ನಾವು ಗಮನಹರಿಸಬೇಕೆಂದು ಸಮಾಜದವರಿಗೆ ಕಿವಿಮಾತು ಹೇಳಿದರು.

ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ಸರ್ಕಾರಗಳು ಕಾಳಜಿ ವಹಿಸಬೇಕೆಂದ ಶ್ರೀಗಳು, ಒಟ್ಟಾರೆ ಸಮಾಜದಲ್ಲಿ ವಿಶ್ವಕರ್ಮ ಸಮಾಜದ ಪಾತ್ರ ಬಹಳ ಮುಖ್ಯವಾಗಿದೆ ಎಂದರು.

ಶಿರಮಗೊಂಡನಹಳ್ಳಿಯ ಬಸವ ತತ್ವ ತಪೋವನದ ಶ್ರೀ ಶಿವಾನಂದ ಗುರೂಜಿ ಆಶೀರ್ವಚನ ನೀಡಿದರು.

ಶಾಸಕ ಬಿ.ಪಿ. ಹರೀಶ್ ಮಾತನಾಡಿ, ವಿಶ್ವಕರ್ಮ ಸಮಾಜದವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು.

ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿ, ರೈತರಿಗೆ ಮತ್ತು ಒಂದು ಮನೆಗೆ ಹೊಸ ರೂಪ ನೀಡುವ ವಿಶ್ವಕರ್ಮ ಸಮಾಜವನ್ನು ಎಲ್ಲರೂ ಸೇರಿ ಬೆಂಬಲಿಸೋಣ ಎಂದರು.

ಮಲೇಬೆನ್ನೂರು ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ಕೆ.ಎನ್. ವೀರಾಚಾರ್ ಅಧ್ಯಕ್ಷತೆ ವಹಿಸಿದ್ದರು.

ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಬಸಾಪುರದ ನಾಗೇಂದ್ರಚಾರ್, ಹರಿಹರ ತಾಲ್ಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಎನ್. ರುದ್ರಾಚಾರ್, ಮಲೇಬೆನ್ನೂರು ಸಮಾಜದ ಅಧ್ಯಕ್ಷ ಶ್ರೀನಿವಾಸಚಾರ್, ದಾವಣಗೆರೆಯ ಪವನ್ ಕನ್‌ಸ್ಟ್ರಕ್ಷನ್ ಮಾಲೀಕ ಎ.ಬಿ. ರವಿ, ಕೆಪಿಟಿಸಿಎಲ್ ಎಇಇ ಸಿ.ಎನ್. ರಮೇಶ್, ಸಮಾಜದ ಮುಖಂಡ ಎಂ.ಇ. ಮಲ್ಲಿಕಾರ್ಜುನಚಾರ್, ಜಿಗಳಿಯ ಶಂಕರಚಾರ್, ಹರಿಹರದ ನೇತ್ರಾವತಿ, ತಾ.ಪಂ. ಐರಣಿ ಅಣ್ಣಪ್ಪ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು. ಈ ವೇಳೆ ದಾನಿಗಳನ್ನು ಸನ್ಮಾನಿಸಲಾಯಿತು.

ಮೇಘನಾ ಪ್ರಾರ್ಥಿಸಿದರು. ಆನಂದಚಾರ್ ಸ್ವಾಗತಿಸಿದರು. ಬೆಸ್ಕಾಂ ಗುತ್ತಿಗೆದಾರ ಪ್ರಕಾಶ್‌ಚಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

error: Content is protected !!