ರೈಲು ದುರಂತದಲ್ಲಿ ಮಡಿದವರಿಗೆ ಜನಮನ ವೇದಿಕೆ ಶ್ರದ್ಧಾಂಜಲಿ

ದಾವಣಗೆರೆ, ಜೂ. 13- ಒಡಿಸ್ಸಾದ ಬಾಲಸೋರ್‌ನಲ್ಲಿ ಭಾರತೀಯ ರೈಲ್ವೆ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದಂತಹ ಅಪಘಾತವಾಗಿ ರುವುದು ದುರ್ದೈವದ ಸಂಗತಿ. ಈ ಅಪಘಾತದಲ್ಲಿ ನೂರಾರು ಜನರ ಸಾವು, ನೋವುಗಳು, ಬಂಧುಗಳ ದುಃಖ ಬಹಳ ದಿನಗಳವರೆಗೆ ಪ್ರತೀ ಭಾರತೀಯನ ಮನಸ್ಸಿನಲ್ಲಿ ಕಾಡುತ್ತಿರುತ್ತದೆ ಎಂದು ಕರ್ನಾಟಕ ಜನಮನ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ನಾಗೇಂದ್ರ ಬಂಡೀಕರ್ ತಿಳಿಸಿದ್ದಾರೆ. 

ಈ ರೈಲ್ವೆ ದುರಂತಕ್ಕೆ ಕಾರಣವನ್ನು ಹುಡುಕುವುದು ಮಾತ್ರ ಈ ದುಃಖತಪ್ತ ಕುಟುಂಬಗಳಿಗೆ ಸಾಂತ್ವನ ನೀಡಲಾರದು. ಈ ಪ್ರಮಾದಕ್ಕೆ ಕಾರಣರಾದವರನ್ನು ಸರ್ಕಾರ ಶಿಕ್ಷಿಸುವಂತಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ. ಕರ್ನಾಟಕ ಪ್ರವಾಸಿಗರ ವಿಚಾರದಲ್ಲಿ ಅತ್ಯಂತ ತ್ವರಿತಗತಿಯಲ್ಲಿ ಕ್ರಮ ಕೈಗೊಂಡಂತಹ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಧನ್ಯವಾದ ತಿಳಿಸಿರುವ ಅವರು, ಕನ್ನಡಿಗರ ರಕ್ಷಣೆಗೆ ಆದ್ಯತೆ ನೀಡಿ ಪ್ರವಾಸಿಗರನ್ನು ಮರಳಿ ಕರೆತರುವಲ್ಲಿ ಯಶಸ್ವೀ ಕಾರ್ಯಾಚರಣೆ ನಡೆಸಿದ ಸಚಿವ ಸಂತೋಷ್‌ ಲಾಡ್‌ ಅವರನ್ನು ವೇದಿಕೆಯ ಅಧ್ಯಕ್ಷ ನಾಗೇಂದ್ರ ಬಂಡೀಕರ್‌, ಉಪಾಧ್ಯಕ್ಷ ಬಿ.ಎಸ್‌. ಪ್ರವೀಣ್‌ ಪಲ್ಯೇದ, ಮಣಿ ಡಿ. ಸಾಗರ್‌ಕರ್‌ ಅವರುಗಳು ಅಭಿನಂದಿಸಿದ್ದಾರೆ.

error: Content is protected !!