ಅಪೂರ್ಣ ಕೆಲಸಗಳನ್ನು ತತ್‌ಕ್ಷಣವೇ ಪೂರ್ಣಗೊಳಿಸಿ

ಅಪೂರ್ಣ ಕೆಲಸಗಳನ್ನು ತತ್‌ಕ್ಷಣವೇ ಪೂರ್ಣಗೊಳಿಸಿ

ಹರಪನಹಳ್ಳಿ ತಾ.ಪಂ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ ನಿರ್ದೇಶನ

ಹರಪನಹಳ್ಳಿ, ಜೂ. 12 – ಅಪೂರ್ಣಗೊಂಡಿರುವ ಕೆಲಸಗಳನ್ನು ಕೂಡಲೇ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಎಂದು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಶಾಸಕರಾದ ಶ್ರೀಮತಿ ಎಂ.ಪಿ.ಲತಾ ನಿರ್ದೇಶಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ರಾಜೀವಗಾಂಧಿ ಸಭಾಂಗಣದಲ್ಲಿ ನೂತನ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ನೇತೃತ್ವದಲ್ಲಿ ನಡೆದ ಪ್ರಥಮ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಒಟ್ಟು 37 ಇಲಾಖೆಗಳಲ್ಲಿ ಇದುವರೆಗೂ ನಡೆದಿರುವ ಯಾವುದೇ ಕೆಲಸಗಳು ಇರಲಿ  ಅವುಗಳನ್ನು ತ್ವರಿತಗತಿಯಲ್ಲಿ ಮಾಡಿ ಮುಗಿಸಿ ಎಂದರು.

ಕೆಆರ್‍ಡಿಎಲ್ (ಲ್ಯಾಂಡ್ ಆರ್ಮಿ) ಇಲಾಖೆ ಯಲ್ಲಿ ಸುಮಾರು ಕಾಮಗಾರಿಗಳು ಅಪೂರ್ಣ ಗೊಂಡಿದ್ದು, ಇವುಗಳನ್ನು ಕೂಡಲೇ ಪೂರ್ಣಗೊಳಿಸಿ ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಇಲಾಖೆಯ ಎಇಇ ಅಧಿಕಾರಿ ರಮೇಶ್‍ರ ವರಿಗೆ ಸೂಚಿಸಿದ ಅವರು ಈ ಇಲಾಖೆಯನ್ನು ನಮ್ಮ ತಂದೆ ಹುಟ್ಟು ಹಾಕಿದ್ದಾರೆ, ಇದನ್ನು ಮೆಲೇತ್ತುವ ಕೆಲಸ ಮಾಡಿ, ಕೆಳಗಿಳಿಸಬೇಡಿ ಎಂದು ಹೇಳಿದರು.

ಲೋಕಪಯೋಗಿ ಇಲಾಖೆಯಲ್ಲಿ ನಡೆಯು ತ್ತಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದ ಶಾಸಕರು ಕಾಮಗಾರಿ ಯಾವ ಹಂತದಲ್ಲಿದೆ, ಗುತ್ತಿಗೆದಾರರು ಯಾರು, ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡದಿದ್ದರೆ ಹೇಗೆ ಎಂದು ಎಇಇ ಸತೀಶಪಾಟೀಲ್ ಅವರಿಗೆ ಪ್ರಶ್ನಿಸಿದ ಅವರು ಹೀಗೆ ಮುಂದುವರೆದರೆ ಕಷ್ಟವಾಗಲಿದೆ ಎಂದು ಎಚ್ಚರಿಸಿದರು.

ಪಟ್ಟಣದ ಗೋಸಾಯಿ ಗುಡ್ಡದ ಮೇಲೆ ನ್ಯಾಯಾಲಯದ ಕಟ್ಟಡ ಕಾಮಗಾರಿ ಎಷ್ಟು ಕಳಪೆಯಿಂದ ಕೂಡಿದೆ ಎನ್ನುವ ಬಗ್ಗೆ ನಿಮ್ಮ ಗಮನಕ್ಕೆ ಇದೆಯಾ, ಸ್ಥಳಕ್ಕೆ ಬೇಟಿ ನೀಡಿ ವಿಕ್ಷಣೆ ಮಾಡಿದಾಗ ಚಿಕ್ಕ ಗಾತ್ರದಲ್ಲಿ ಬಾಗಿಲನ್ನು ಹಾಕಲಾಗಿದೆ. ಈ ರೀತಿ ನ್ಯಾಯಾಲಯ ಕಟ್ಟಡ ಕಳಪೆಯಿಂದ ಕೂಡಿದ್ದು ಇದನ್ನು ಸರಿಪಡಿಸಿ ಎಂದು ಸೂಚಿಸಿದರು.

ತಾಲ್ಲೂಕಿನ 59 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ನನ್ನ ಗಮನಕ್ಕಿದೆ ಅವುಗಳನ್ನು ಕೂಡಲೇ ಸರಿಪಡಿಸಿ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗೆ ಸೂಚಿಸಿದರು.

ಈಗಾಗಲೇ ಮುಂಗಾರು ಚುರುಕುಗೊಂಡಿದ್ದು ರೈತರಿಗೆ ಬೀಜ-ಗೊಬ್ಬರ ಕೊರತೆ ಆಗದಂತೆ ನೋಡಿಕೊಳ್ಳಿ ಖಾಲಿ ಇರುವ ಹುದ್ದೆಗಳ ವಿವರ ನನಗೆ ಕೋಡಿ ನಾನು ಕೃಷಿ ಸಚಿವರ ಗಮನಕ್ಕೆ ತರುತ್ತೇನೆ ಎಂದು ಕೃಷಿ ಅಧಿಕಾರಿ ಮಂಜುನಾಥ ಗೊಂದಿಯವರಿಗೆ ತಿಳಿಸಿದರು.

ಕಳೆದ ಬಾರಿ ಹಲುವಾಗಲು ಗ್ರಾಮದಲ್ಲಿ ಮಕ್ಕಳ ಬಿಸಿಯೂಟದಲ್ಲಿ ಹುಳುಗಳು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಮತ್ತೆ ಅದೇ ರೀತಿ ಘಟನೆ ಮರುಕಳಿಸದಂತೆ ಮುಂಜಾಗೃತೆ ವಹಿಸಿ, ಮಳೆಗಾಲ ಆರಂಭವಾಗಿದ್ದು ಶಿಥಿಲಗೊಂಡಿರುವ ಶಾಲಾ ಕೊಠಡಿಗಳ ಬಗ್ಗೆ ಎಚ್ಚರಿಕೆವಹಿಸಿ ದುರಸ್ಥಿ ಮಾಡಿಕೊಳ್ಳಲು ಮುಂದಾಗುವಂತೆ ಹೇಳಿದರು.

ಅನೇಕ ಹಳ್ಳಿಗಳಲ್ಲಿ ಸ್ಮಶಾನಗಳು ಇಲ್ಲದಂತಾಗಿವೆ ಆದ್ದರಿಂದ ಸ್ಮಶಾನ ಇಲ್ಲದ ಕಡೆಗಳಲ್ಲಿ ಸ್ಥಳಗಳನ್ನು ಗುರುತಿಸಿ ಅಲ್ಲಿನ ಜನರಿಗೆ ಅನುಕೂಲಕ ಕಲ್ಪಿಸಿ ಎಂದು ತಹಶೀಲ್ದಾರ್‌ ಶಿವಕುಮಾರ ಬಿರಾದಾರಗೆ ತಿಳಿಸಿದರು.

ಪಡಿತರ ಅಕ್ಕಿ ಕಳ್ಳ ಸಂತೆಯಲ್ಲಿ ಮಾರಾಟವಾಗದಂತೆ ಕ್ರಮ ವಹಿಸಿ, ಸರ್ಕಾರದ ಯೋಜನೆಗಳು ಪೋಲಾಗದಂತೆ ನೋಡಿಕೊಳ್ಳಿ ಎಂದ ಅವರು ಹೊರವಲಯದಲ್ಲಿರುವ ಕುರಿ ಮತ್ತು ಮೇಕೆ ಸಂತೆ ಮಾರುಕಟ್ಟೆಗೆ ವಾಹನಗಳ ಪಾರ್ಕಿಂಗ್‍ಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ಬಹುಬೇಡಿಕೆಯಾಗಿರುವ ಗರ್ಭಗುಡಿ ಬ್ರಿಡ್ಜ್ ಬ್ಯಾರೇಜ್ ನಿರ್ಮಾಣ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗೆ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಹಾಗೂ ಬಿಸಿಎಂ ಇಲಾಖೆಯ ವರದಿಯನ್ನು ಪಡೆದ ಶಾಸಕರು ಇಲಾಖೆಯ ವಸತಿ ನಿಲಯಗಳ ಹೊಸ ಕಟ್ಟಡಗಳನ್ನು ಪೂರ್ಣಗೊಳಿಸಿ ಕೂಡಲೇ ಹಸ್ತಾಂತರಿಸುವಂತೆ ಕೆಆರ್‍ಡಿಎಲ್ ಆಧಿಕಾರಿಗಳಿಗೆ ಸೂಚಿಸಿದರು.

ವಲಯ ಹಾಗೂ ಸಾಮಾಜಿಕ ಅರಣ್ಯ, ವಿದ್ಯುತ್ ಇಲಾಖೆ, ಮೀನುಗಾರಿಕೆ, ಆರೋಗ್ಯ, ಪುರಸಭೆ, ಪಶುಸಂಗೋಪನೆ, ತೋಟಗಾರಿಕೆ, ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ವರದಿಯನ್ನು ಪಡೆದರು.

ಕೈಗಾರಿಕೆ ಇಲಾಖೆ, ಪಿಎಂಜೆಎಸ್‍ವೈ, ಸಹಕಾರ ಇಲಾಖೆ, ನಿರ್ಮಿತಿ ಕೇಂದ್ರ ಸೇರಿದಂತೆ ಸಭೆಗೆ ಗೈರಾಗಿರುವ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಾ.ಪಂ. ಇಓ ಅವರಿಗೆ ಸೂಚಿಸಿದರು. 

ಈ ಸಂದರ್ಭದಲ್ಲಿ ಉಪವಿಭಾಗಾದಿಕಾರಿ ಟಿ.ವಿ.ಪ್ರಕಾಶ್, ತಹಶೀಲ್ದಾರ್‌ ಶಿವಕುಮಾರ ಬಿರಾದಾರ, ತಾ.ಪಂ. ಇಓ ಕೆ.ಆರ್.ಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಶಿವಕುಮಾರ ಎರಗುಡಿ ಸೇರಿದಂತೆ ಇತರರು ಇದ್ದರು.

error: Content is protected !!