ಎವಿಕೆ ಕಾಲೇಜಿನಿಂದ ಇಂದಿನಿಂದ ಎನ್‍ಎಸ್‍ಎಸ್ ಶಿಬಿರ

ದಾವಣಗೆರೆಯ ಎ.ವಿ. ಕಮಲಮ್ಮ ಮಹಿಳಾ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ-1 ಮತ್ತು 2 ಇವರ ಸಂಯುಕ್ತಾಶ್ರಯದಲ್ಲಿ ‘ಯುವಜನತೆಯ ನಡೆ-ಗ್ರಾಮ ಸ್ವಚ್ಛತೆಯ ಕಡೆ’ ಘೋಷವಾಕ್ಯದಡಿ  ಇಂದಿನಿಂದ ಇದೇ ದಿನಾಂಕ 19ರವರೆಗೆ ದಾವಣಗೆರೆ ತಾಲ್ಲೂಕಿನ ಹೊಸಬೆಳವನೂರು ಗ್ರಾಮದಲ್ಲಿ ವಿಶೇಷ ವಾರ್ಷಿಕ ಶಿಬಿರವನ್ನು ಆಯೋಜಿಸಲಾಗಿದೆ. 

ಸಂಜೆ 6 ಗಂಟೆಗೆ ಆರಂಭವಾಗುವ ಕಾರ್ಯಕ್ರಮವನ್ನು ಬಾಪೂಜಿ ವಿದ್ಯಾಸಂಸ್ಥೆಯ ಸದಸ್ಯರಾದ ಡಾ. ಪ್ರಭಾ ಮಲ್ಲಿ ಕಾರ್ಜುನ್ ಉದ್ಘಾಟಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲೆ ಕಮಲಾ ಸೊಪ್ಪಿನ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದ ಸಂಯೋಜನಾಧಿಕಾರಿ ಡಾ. ಅಶೋಕ್ ಕುಮಾರ್ ವಿ. ಪಾಳೇದ್, ಪ್ರೊ. ಸಿ.ಹೆಚ್. ಮುರಿಗೇಂದ್ರಪ್ಪ, ಗ್ರಾ.ಪಂ. ಅಧ್ಯಕ್ಷರಾದ ಟಿ.ಎ. ಅಶು, ಪಿಡಿಓ ಪಿ.ಟಿ. ರೇವತಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ನಂತರ ಜೂ.14ರಿಂದ 18ರವರೆಗೆ ವಿವಿಧ ಸೇವಾ ಕಾರ್ಯಕ್ರಮಗಳು ನಡೆಯಲಿದ್ದು, ಜೂ.19ರಂದು ಸಂಜೆ 6 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗ್ರಾ.ಪಂ. ಸದಸ್ಯೆ ಎಂ.ಪಿ. ನವೀನ್ ಕುಮಾರ್ ವಹಿಸಲಿದ್ದಾರೆ. ಡಾ. ಎನ್. ವೀಣಾ ಅವರು ಸಂವಿಧಾನ ಮತ್ತು ಮಹಿಳಾ ಸಬಲೀಕರಣದ ಕುರಿತು ಮತ್ತು ಸಹಾಯಕ ಪ್ರಾಧ್ಯಾಪಕಿ ಡಾ. ಆರ್.ಜಿ. ಕವಿತಾ ‘ಸ್ತ್ರೀವಾದಿ ಸಾಹಿತ್ಯ’ ದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎ.ಎನ್. ಬಸವರಾಜ್, ಬಿ.ಆರ್. ನಾಗರಾಜ್, ಜಿ.ಸಿ. ಬಸವನಗೌಡ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ 9 ಗಂಟೆಗೆ ಜಾನುವಾರುಗಳ ಉಚಿತ ತಪಾಸಣೆ ಹಮ್ಮಿಕೊಳ್ಳಲಾಗಿದೆ.

error: Content is protected !!