ಹಾವೇರಿ, ಜೂ. 12 – ಸರ್ಕಾರಿ ಬಸ್ ಬಾಗಿಲ ಬಳಿ ನಿಂತಿದ್ದ ವಿದ್ಯಾರ್ಥಿನಿ ಬಿದ್ದು ಸಾವನ್ನಪ್ಪಿದ ದುರ್ಘಟನೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಕುಸನೂರು ಗ್ರಾಮದ ಬಳಿ ಈ ಘಟನೆ ನಡೆದಿದೆ. ಮಧು ಕುಂಬಾರ ಎಂಬ 14 ವರ್ಷದ ಬಾಲಕಿ ಸಾವನ್ನಪ್ಪಿರುವ ದುರ್ದೈವಿ. ಬಸ್ನಲ್ಲಿ ಜನ ತುಂಬಿದ್ದಾರೆಂದು ಬಸ್ ಬಾಗಿಲ ಬಳಿ ವಿದ್ಯಾರ್ಥಿನಿ ನಿಂತಿದ್ದಳು. ಈ ವೇಳೆ ಬಸ್ ತಿರುಗುವಾಗ ವಿದ್ಯಾರ್ಥಿನಿ ಮೇಲೆ ಹೆಚ್ಚಿನ ಜನರು ಭಾರ ಹಾಕಿದ್ದರಿಂದ ಬಾಲಕಿ ಆಯತಪ್ಪಿ ನೆಲಕ್ಕೆ ಬಿದ್ದು ಸಾವನ್ನಪ್ಪಿರುವುದಾಗಿ ಹೇಳಲಾಗಿದೆ. ಬಾಲಕಿ ಹಾನಗಲ್ ತಾಲೂಕಿನ ವಾಸನ ಗ್ರಾಮದಿಂದ ಕುಸನೂರು ಗ್ರಾಮದ ಪ್ರೌಢಶಾಲೆಗೆ ಬರುತ್ತಿದ್ದಳು.