ದಾವಣಗೆರೆ,ಜೂ.12- ಸ್ಥಳೀಯ ವಿನೋಬನಗರ ಪಿ.ಬಿ. ರಸ್ತೆಯಲ್ಲಿರುವ ಆರ್ಯ-ಈಡಿಗರ ಸಮಾಜದ ಮಹಿಳಾ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ದಾವಣಗೆರೆ ಜಿಲ್ಲಾ ಆರ್ಯ – ಈಡಿಗರ ಸಂಘದ ಅಧ್ಯಕ್ಷ ಹೆಚ್. ಶಂಕರ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
2023-24ನೇ ಸಾಲಿನಲ್ಲಿ ಪಿಯುಸಿ, ಪದವಿ,ಇಂಜಿನಿಯರಿಂಗ್ ಪದವಿ, ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿರುವ ಆರ್ಯ-ಈಡಿಗರ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಆಸಕ್ತ ವಿದ್ಯಾರ್ಥಿನಿಲಯರು ಇದೇ ದಿನಾಂಕ 30ರೊಳಗೆ ವಿದ್ಯಾರ್ಥಿ ನಿಲಯದಲ್ಲಿ ಅರ್ಜಿ ಪಡೆದು ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬಹುದು. ವಿವರಕ್ಕೆ ದೂರವಾಣಿ 08192-254261 ಅಥವಾ ಮೊಬೈಲ್ ಸಂಖ್ಯೆ 88922-66468 ಅಥವಾ 98453-55008ರಲ್ಲಿ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು ಎಂದು ಸಂಘದ ಕಾರ್ಯದರ್ಶಿ ಎ. ನಾಗರಾಜ್ ತಿಳಿಸಿದ್ದಾರೆ.