ದಾವಣಗೆರೆ, ಜೂ.10- ನಗರದ ಪಿ.ಬಿ. ರಸ್ತೆಯ ಜಿಎಂಐಟಿ ಕಾಲೇಜಿನ ಬಳಿ ಇರುವ ಪೈಲ್ವಾನ್ ಪಾಪಣ್ಣ ಲೇಔಟ್ ಬಳಿ ಇಂದು ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಹೋಮಿಯೋಪತಿ ವೈದ್ಯ ಡಾ. ಕೆ. ಕಿರಣ್ ಮೃತಪಟ್ಟಿದ್ದಾರೆ.
ನಗರದ ಶ್ರೀ ಶಿವಕುಮಾರಸ್ವಾಮಿ ಬಡಾವಣೆ ನಿವಾಸಿಯಾಗಿರುವ ಮೃತ ಕಿರಣ್, ಹರಿಹರದಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದು, ಹರಿಹರದಿಂದ ನಗರಕ್ಕೆ ಮೋಟಾರ್ ಬೈಕ್ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಎದುರಿಗೆ ಬಂದ ಲಾರಿ ಅಪ್ಪಳಿಸಿದ ಪರಿಣಾಮ ಈ ಅಪಘಾತ ನಡೆದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಹೊನ್ನಾಳಿ ತಾಲ್ಲೂಕು ಯರೇಚಿಕ್ಕನಹಳ್ಳಿ ಗ್ರಾಮದ ಶ್ರೀಮತಿ ಮಂಜುಳಾ ಮತ್ತು ಡಿ.ಬಿ. ಕುಮಾರಸ್ವಾಮಿ ದಂಪತಿ ಪುತ್ರ ಕಿರಣ್ ಅವರಿಗೆ ಸುಮಾರು 26 ವರ್ಷ ವಯಸ್ಸಾಗಿತ್ತು. ಮೃತರ ಅಂತ್ಯಕ್ರಿಯೆಯು ನಾಳೆ ದಿನಾಂಕ 11ರ ಭಾನುವಾರ ಮಧ್ಯಾಹ್ನ 12 ಗಂಟೆಗೆ ಯರೇಚಿಕ್ಕನಹಳ್ಳಿಯಲ್ಲಿ ನಡೆಯಲಿದೆ.
ಮೃತರ ಕಿರಣ್ ಅವರ ತಂದೆ ಡಿ.ಬಿ. ಕುಮಾರಸ್ವಾಮಿ ನಗರದ ಬಾಪೂಜಿ ಸಹಕಾರಿ ಬ್ಯಾಂಕ್ ಹದಡಿ ರಸ್ತೆ ಶಾಖೆಯ ಉದ್ಯೋಗಿ.