ದಾವಣಗೆರೆ, ಜೂ. 11- ದಾವಣಗೆರೆ ವಿಶ್ವವಿದ್ಯಾಲಯ ಮಾ.ಸ.ಬ ಕಲಾ ಮತ್ತು ವಾಣಿಜ್ಯ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಕುಣೆಬೆಳೆಕೆರೆ ಗ್ರಾಮದಲ್ಲಿ 2022-23 ರ ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭವನ್ನು ನೆರವೇರಿಸಲಾಯಿತು.
ಅಧ್ಯಕ್ಷತೆಯನ್ನು ಆನೆಕೊಂಡದ ಬಸವರಾಜಪ್ಪ ವಹಿಸಿದ್ದರು. ಉದ್ಘಾಟನೆಯನ್ನು ಪ್ರೊ. ನೀಲಾಂಬಿಕ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಡಾ.ಅಶೋಕ್ ಕುಮಾರ್, ಪ್ರೊ. ಸಿ.ಎಚ್, ಮುರುಗೇಂದ್ರಪ್ಪ, ಮೂಲಿಮನೆ ಬಸವರಾಜಪ್ಪ, ಕರಿಬಸಪ್ಪ, ಕುಬೇಂದ್ರ, ಕಾರ್ಯಕ್ರಮಾಧಿಕಾರಿಗಳಾದ ಡಾ. ರಾಘವೇಂದ್ರ. ಆರ್ ಡಾ. ಪ್ರವೀಣ್ ಕುಮಾರ್, ಪ್ರೊ. ಪರಮೇಶಿ, ಪ್ರೊ. ಶಾಂತಕುಮಾರ್, ಪ್ರೊ. ವಿಜಯ್ ಕುಮಾರ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.