ದಾವಣಗೆರೆ, ಜೂ.11- ದಾವಣಗೆರೆ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗ ಮತ್ತು ಅರ್ಥಶಾಸ್ತ್ರ ಅಧ್ಯಾಪಕರ ವೇದಿಕೆ ಸಹಯೋಗದಲ್ಲಿ ಎನ್ಇಪಿ ನಾಲ್ಕನೇ ಸೆಮಿಸ್ಟರ್‌ನ ಪಠ್ಯ ಕ್ರಮದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಕುಲಪತಿ ಪ್ರೊ. ಬಿ. ಡಿ. ಕುಂಬಾರ್ ಕಾರ್ಯಾಗಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿವಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಸುಚಿತ್ರ ವೇದಿಕೆಯ ಅಧ್ಯಕ್ಷ ಪ್ರೊ. ಭೀಮಣ್ಣ ಸುಣಗಾರ್, ಕಾರ್ಯದರ್ಶಿ ಪ್ರೊ.ಪ್ರವೀಣ್ ಕುಮಾರ್, ಖಜಾಂಚಿ ಪ್ರೊ. ಮಂಜಣ್ಣ, ಸಹ ಕಾರ್ಯದರ್ಶಿ ಪ್ರೊ. ಚಂದ್ರಶೇಖರ್, ಪ್ರೊ.ರಂಗಪ್ಪ, ಪ್ರೊ.ಹುಚ್ಚೇಗೌಡ, ಪ್ರೊ.ಸೆಲ್ವಿ, ಪ್ರೊ. ಗಿರೀಶ್, ಪ್ರೊ. ಸುಂದರಂ, ಬಿಓಇ ಚೇರ್ಮನ್ ಪ್ರೊ. ಪಂಚಾಕ್ಷರಿ, ಮಾಜಿ ಬಿಓಇ ಚೇರ್ಮನ್ ಪ್ರೊ. ಷಣ್ಮುಖ ಮತ್ತು ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ಅರ್ಥಶಾಸ್ತ್ರ ಪ್ರಾಧ್ಯಾಪಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.