ದಾವಣಗೆರೆ, ಜೂ.11- ಸಮೃದ್ದ ಮಳೆಯಾಗುವ ಹಿನ್ನೆಲೆಯಲ್ಲಿ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಮುಂದೆ ವಾರದ ಸಂತೆಯನ್ನು ನಡೆಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಜೆಡಿಎಸ್ ಮುಖಂಡ ಎಂ.ಎನ್. ನಾಗರಾಜ್ ಅವರು ಮಹಾನಗರ ಪಾಲಿಕೆಯನ್ನು ಒತ್ತಾಯಿಸಿದ್ದಾರೆ.
ದುಗ್ಗಮ್ಮನ ದೇವಸ್ಥಾನದ ಮುಂದೆ ವಾರದ ಸಂತೆ ನಡೆಸಿದ್ದಲ್ಲಿ ಮಳೆಯಾಗಲಿದೆ ಎಂಬ ಪ್ರತೀತಿ ಇದ್ದು, ಕಾರಣ, ಮಹಾನಗರ ಪಾಲಿಕೆ ಮಹಾಪೌರರು ಮತ್ತು ಆಯುಕ್ತರು ತತ್‌ಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಹೀಗೆ ಸಂತೆ ನಡೆಸಿದ್ದಲ್ಲಿ ಮಳೆಯಾದ ಸಾಕಷ್ಟು ಉದಾಹರಣೆಗಳಿದ್ದು, ನಿಗದಿತ ವೇಳೆಗೆ ಮಳೆಯಾಗದ ಸಂದರ್ಭದಲ್ಲೆಲ್ಲಾ ವಾರದ ಸಂತೆಯನ್ನು ದುಗ್ಗಮ್ಮನ ದೇವಸ್ಥಾನದ ಮುಂದೆ ನಡೆಸುತ್ತಾ ಬರಲಾಗಿದೆ ಎಂದು ನಾಗರಾಜ್ ತಿಳಿಸಿದ್ದಾರೆ.