ಮಲೇಬೆನ್ನೂರು, ಜೂ.9- ಹಿಂಡಸ ಘಟ್ಟ ಗ್ರಾಮದಲ್ಲಿ ಬುಧವಾರ ರಾತ್ರಿ ಆಕ ಸ್ಮಿಕ ಬೆಂಕಿ ಬಿದ್ದು, ಸುಮಾರು 45 ಸಾವಿರ ರೂ. ಮೌಲ್ಯದ 5 ಲೋಡ್ ಭತ್ತದ ಹುಲ್ಲಿನ ಬಣವೆ ಸುಟ್ಟು ಭಸ್ಮವಾಗಿದೆ. ಗ್ರಾಮದ ಇಂದ್ರಮ್ಮ ಮಹೇಶ್ವರಪ್ಪ ಅವರಿಗೆ ಸೇರಿದ ಹುಲ್ಲಿನ ಬಣವೆ ಇದಾಗಿದ್ದು, ಬೆಂಕಿ ಬಿದ್ದ ತಕ್ಷಣ ಗ್ರಾಮಸ್ಥರು ದಾವಿಸಿ, ಬೆಂಕಿ ನಂದಿ ಸಲು ಹರಸಾಹಸ ಪಟ್ಟರು. ಅಗ್ನಿ ಶಾಮಕ ದಳದವರು ಆಗಮಿಸಿ, ಬೆಂಕಿ ನಂದಿಸಿ, ಹೆಚ್ಚಿನ ಅನಾಹುತ ತಪ್ಪಿಸಿದರು. ಮಹೇಶ್ವ ರಪ್ಪ ಈ ಹುಲ್ಲನ್ನು ಖರೀದಿಸಿದ್ದರು ಎನ್ನಲಾ ಗಿದೆ. ಕಳೆದ ವಾರ ಹಾಲಿವಾಣ ಗ್ರಾಮ ದಲ್ಲೂ ಆಕಸ್ಮಿಕ ಬೆಂಕಿ ಬಿದ್ದು, 50 ಲೋಡ್ ಹುಲ್ಲಿನ ಬಣವೆಗಳು ಭಸ್ಮವಾಗಿದ್ದವು.
February 24, 2025