ಗುಳ್ಳೆಹಳ್ಳಿ ಬಳಿ ರಸ್ತೆ ಅಪಘಾತ : ಸಾವು

ಚನ್ನಗಿರಿ, ಜೂ.9- ಮುಂದೆ ಹೋಗುತ್ತಿದ್ದ ಟಿವಿಎಸ್ ಎಕ್ಸೆಲ್ ವಾಹನ ದಿಢೀರ್ ಬ್ರೇಕ್ ಹಾಕಿದ ಪರಿಣಾಮ ಹಿಂದೆ ಬೈಕ್‌ನಲ್ಲಿ ಬರುತ್ತಿದ್ದ ವ್ಯಕ್ತಿ ಡಿಕ್ಕಿ ಹೊಡೆದು, ಬೈಕ್‌ ನಿಂದ ನೆಲಕ್ಕೆ ಬಿದ್ದ ವ್ಯಕ್ತಿಯ ಮೇಲೆ ಬೇರೊಂದು ಬೈಕು ಹತ್ತಿ ಬಿದ್ದ ವ್ಯಕ್ತಿ ಮೃತಪಟ್ಟ ಘಟನೆ ಚನ್ನಗಿರಿ ತಾಲ್ಲೂಕು ಗುಳ್ಳೆಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ನಡೆದಿದೆ.

ಹಿರೇಉಡ ತಾಂಡಾದ ಆಂಜನೇಯ ಎಸ್. (32) ಮೃತ ವ್ಯಕ್ತಿಯಾಗಿದ್ದು, ಮೃತನ ಪತ್ನಿ  ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

error: Content is protected !!