ಮಾಜಿ ಪಾಲಿಕೆ ಸದಸ್ಯ ದಿನೇಶ್ ಕೆ.ಶೆಟ್ಟಿ ಕರೆ
ದಾವಣಗೆರೆ, ಜೂ. 9 – ಇಂದಿನ ಪರಿಸ್ಥಿತಿಯಲ್ಲಿ ಯುವಕರು ಸ್ವಾವಲಂ ಬಿಗಳಾಗಲು ಸ್ಪರ್ಧೆ ಎಷ್ಟಿದೆಯೋ ಅದಕ್ಕಿಂತ ಹೆಚ್ಚು ಅವಕಾಶಗಳು ಮತ್ತು ಯೋಜನೆಗಳಿವೆ. ಸರ್ಕಾರ ಹಾಗೂ ಅನೇಕ ಖಾಸಗಿ ಸಂಸ್ಥೆಗಳು ಕೊಡುವ ಯೋಜನೆಗಳ ಪ್ರಯೋಜನ ಪಡೆದು ಎಲ್ಲಾ ವರ್ಗದ ಯುವಕ, ಯುವತಿ ಯರು ಸ್ವಾವಲಂಬಿಗಳಾಗಬೇಕು ಎಂದು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ದಿನೇಶ್ ಕೆ.ಶೆಟ್ಟಿ ಕರೆ ನೀಡಿದರು.
ನಗರದ ಹರ್ಷಿತ್ ಕಂಪ್ಯೂಟರ್ ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಕಂಪ್ಯೂಟರ್ ಹಾಗೂ ಅಕೌಂಟಿಂಗ್ ತರಬೇತಿಯ ಮುಕ್ತಾಯ ಸಮಾರಂಭದಲ್ಲಿ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ಕೆಲವು ದಶಕಗಳ ಹಿಂದೆ ಅಂದಿನ ಯುವಕರಿಗೆ ಈಗ ಇರುವಷ್ಟು ತರಬೇತಿ, ಮಾರ್ಗದರ್ಶನ, ವಿದ್ಯಾರ್ಥಿ ವೇತನ ಮತ್ತು ಅವಕಾಶಗಳು ಇರಲಿಲ್ಲ. ಇಂದು ಅವೆಲ್ಲವೂ ಸಾಕಷ್ಟು ಪ್ರಮಾಣದಲ್ಲಿವೆ. ಆದರೆ, ಅವುಗಳ ಪ್ರಯೋಜನ ಪಡೆದು ಉತ್ತಮ ಸಾಧನೆ ಮಾಡಬೇಕಾದದ್ದು ಯುವಕ – ಯುವತಿಯರ ಹೊಣೆಗಾರಿಕೆ. ಅದನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದು ಅವರು ತಿಳಿಸಿದರು.
ಪಾಲಿಕೆಯ ಸದಸ್ಯ ಎ.ನಾಗರಾಜ್ ಮಾತ ನಾಡಿ, ಇಂದು ನಮ್ಮ ಮಹಾನಗರ ಪಾಲಿಕೆಯಿಂ ದಲೇ ಕಂಪ್ಯೂಟರ್, ಹೊಲಿಗೆ ಯಂತ್ರ ಮೊದಲಾ ದವುಗಳನ್ನು ಉಚಿತವಾಗಿ ಅರ್ಹ ಫಲಾನುಭವಿ ಗಳಿಗೆ ವಿತರಿಸುತ್ತಿದ್ದೇವೆ. ಯುವಕ ಯುವತಿಯರು ಅದರ ಪ್ರಯೋಜನ ಪಡೆದುಕೊಳ್ಳ ಬೇಕು. ಎಷ್ಟೋ ಖಾಸಗಿ ಅಂಗಡಿ ಹಾಗೂ ಕಚೇರಿಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ಅವುಗಳನ್ನು ಗುರುತಿಸಿ, ಪಡೆದು ಸ್ವಾವಂಬಿಗಳಾಗ ಬೇಕು ಎಂದು ತಿಳಿಸಿದರು. ಹರ್ಷಿತ್ ಕಂಪ್ಯೂಟರ್ ವ್ಯವಸ್ಥಾಪಕ ಜಿ.ಮಹಾಂತೇಶ್ ಅವರು ಸಂಕಲ್ಪ ಫೌಂಡೇಶನ್ ಮೂಲಕ ಮಾಡುತ್ತಿರುವ ಸಾಮಾಜಿಕ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪತ್ರಕರ್ತ ಇ.ಎಂ.ಮಂಜುನಾಥ, ಶೈಕ್ಷಣಿಕ ಸಲಹೆಗಾರ ಮತ್ತು ತರಬೇತುದಾರ ಜಗನ್ನಾಥ ನಾಡಿಗೇರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಹರ್ಷಿತ್ ಕಂಪ್ಯೂಟರ್ ವ್ಯವಸ್ಥಾಪಕ ಜಿ.ಮಹಾಂತೇಶ್ ಸ್ವಾಗತಿಸಿದರು.