ನಕಲಿ ಬಂಗಾರದ ನಾಣ್ಯ ನೀಡಿ 5.10 ಲಕ್ಷ ರೂ. ವಂಚನೆ

ದಾವಣಗೆರೆ, ಜೂ.8- ನಕಲಿ ಬಂಗಾರದ ನಾಣ್ಯ ನೀಡಿ 5.10 ಲಕ್ಷ ರೂಪಾಯಿ ವಂಚನೆ ಮಾಡಿದ ಘಟನೆ ಕಳೆದ ಮೇ 26ರಂದು ಸಂತೇಬೆನ್ನೂರು ತಾಲ್ಲೂಕು ಸಿದ್ಧನಮಠ ಗ್ರಾಮದ ಮಾವಿನ ತೋಟದ ಬಳಿ ನಡೆದಿದೆ. 

ಅಪರಿಚಿತ ವ್ಯಕ್ತಿ ಕರೆ ಮಾಡಿ ಮನೆ ಪಾಯ ತೆಗೆಯುವಾಗ ಚಿನ್ನದ ಗಟ್ಟೆಗಳು ಸಿಕ್ಕಿದ್ದು, ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿ ಸ್ಯಾಂಪಲ್ ಎಂದು 2 ಚಿನ್ನದ ನಾಣ್ಯ ಕೊಟ್ಟು ನಂಬಿಸಿ, ನಂತರ  200 ಗ್ರಾಂ ನಕಲಿ ನಾಣ್ಯಗಳನ್ನು ನೀಡಿ  5.10 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾರೆ. 

ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಸಂತೋಷ್ ಎಂಬುವವರು ದೂರು ನೀಡಿದ್ದಾರೆ.

error: Content is protected !!