ವಿಶೇಷ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ದಾವಣಗೆರೆ, ಜೂ.8- ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಸಬಲೀಕರಣ ಇಲಾಖೆಯಿಂದ ನಗರದಲ್ಲಿನ ಸಂಯುಕ್ತ ಪ್ರಾದೇಶಿಕ ಕೌಶಲ್ಯಾಭಿವೃದ್ಧಿ ಕೇಂದ್ರ ಹಾಗೂ ಪುನರ್ವಸತಿ ಸಬಲೀಕರಣ ಕೇಂದ್ರದಿಂದ ಪ್ರಸಕ್ತ ಸಾಲಿನಲ್ಲಿ ಡಿಪ್ಲೋಮಾ ಇನ್ ಸ್ಪೇಷನ್ ಎಜುಕೇಶನ್ ಇಂಟಲೆಕ್ಚುಯಲ್ ಡೆವಲಪ್‍ಮೆಂಟಲ್ ಡಿಸೆಬಿಲಿಟಿ ಮತ್ತು ಡಿಪ್ಲೋಮಾ ಇನ್ ಸ್ಪೇಷನ್ ಎಜುಕೇಷನ್ ಇಯರಿಂಗ್ ಇಂಪೈರ್‌ಮೆಂಟ್‌ ಕೋರ್ಸ್‍ಗಳಿಗೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಅಗತ್ಯ ದಾಖಲೆಗಳೊಂದಿಗೆ ಜುಲೈ 5ರೊಳಗಾಗಿ ಸಲ್ಲಿಸಬೇಕು. ದಿವ್ಯಾಂಗ ಅಭ್ಯರ್ಥಿಗಳಿಗೆ ಬೋಧನಾ ಶುಲ್ಕದ ವಿನಾಯಿತಿ ಇರುತ್ತದೆ. ವಿನಾಯಿತಿ ಪಡೆಯಲು ಯುಬಿಐಡಿ ಕಾರ್ಡನ್ನು ಅರ್ಜಿಯೊದಿಗೆ ಲಗತ್ತಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೇವರಾಜ ಅರಸು ಬಡಾವಣೆಯ ಬಿ ಬ್ಲಾಕ್ ನಲ್ಲಿರುವ ಸಂಯುಕ್ತ ಪ್ರಾದೇಶಿಕ ಕೌಶಲ್ಯಾಭಿವೃದ್ಧಿ ಕೇಂದ್ರ ಅಥವಾ 08192 233465 ಗೆ ಸಂಪರ್ಕಿಸಬಹುದು.

error: Content is protected !!