ದಾವಣಗೆರೆ, ಜೂ. 7- ಹದಿನೇಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗಲು ಕಾರಣನಾದ ತಾಲ್ಲೂಕಿನ ಯುವಕನೊಬ್ಬನ ಮೇಲೆ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಯುವತಿಗೆ ಕಳೆದೊಂದು ವರ್ಷದಿಂದ ಪರಿಚಯವಾಗಿದ್ದ ಯುವಕನನ್ನು, ಪ್ರೀತಿಸುವುದಾಗಿ ಹೇಳಿ, ಮದುವೆಯಾಗುವುದಾಗಿ ನಂಬಿಸಿ, ಕುಂದುವಾಡ ಕೆರೆ ಹತ್ತಿರದ ನಿರ್ಜನ ಪ್ರದೇಶಕ್ಕೆ ಐದಾರು ಬಾರಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಆರೋಗ್ಯ ಸರಿ ಇಲ್ಲ ಎಂದು ಚಿಕಿತ್ಸೆಗಾಗಿ ಯುವತಿ ಪೋಷಕರೊಂದಿಗೆ ಆಸ್ಪತ್ರೆಗೆ ಬಂದಾಗ ಯುವತಿ ಗರ್ಭಿಣಿಯಾಗಿರುವುದಾಗಿ ವೈದ್ಯರು ಹೇಳಿದ್ದಾರೆ. 18 ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನ ಮಗಳನ್ನು ಬಲವಂತವಾಗಿ ಕರೆದು ಕೊಂಡು ಹೋಗಿ ಲೈಂಗಿಕ ಅಚ್ಯಾಚಾರ ಮಾಡಿದ ಯುವಕನ ಮೇಲೆ ಕ್ರಮ ಕೈಗೊ ಳ್ಳುವಂತೆ ಯುವತಿಯ ತಂದೆ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.