ದಾವಣಗೆರೆ, ಜೂ. 7- ಕೇಂದ್ರ ಸರ್ಕಾರದ ಮಹತ್ವಾಂಕ್ಷಿ ಪಿ. ಎಂ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಧನಸಹಾಯ ಪಡೆಯಬೇಕಾದಲ್ಲಿ ರೈತರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಈ ವಿಷಯವನ್ನು ರೈತರಿಗೆ ವಿಭಿನ್ನ ಮಾಧ್ಯಮಗಳ ಮೂಲಕ ಕಳೆದ ಒಂದು ವರ್ಷದಿಂದ ತಿಳಿಸುತ್ತಾ ಬಂದರೂ ಸಹ ಜಿಲ್ಲೆಯಲ್ಲಿ ಇನ್ನೂ 55177 ರೈತರು ಇ-ಕೆವೈಸಿ ಮಾಡಿಸಿರುವುದಿಲ್ಲ. ಸದರಿ ರೈತರು ಇ-ಕೆವೈಸಿ ಮಾಡಿಸದಿದ್ದಲ್ಲಿ ಆರ್ಥಿಕ ಧನ ಸಹಾಯ ಸ್ಥಗಿತಗೊಳಿ ಸಲಾಗುತ್ತದೆ.
ಇ-ಕೆವೈಸಿ ಮಾಡಿಸಿಕೊಳ್ಳದ ಫಲಾನುಭವಿಗಳಿಗೆ ಮುಂದೆ ಕೇಂದ್ರ ಸರ್ಕಾರದಿಂದ ಆರು ಸಾವಿರ ಹಾಗೂ ರಾಜ್ಯ ಸರ್ಕಾರದಿಂದ 4 ಸಾವಿರ ರೂಪಾಯಿಗಳ ಆರ್ಥಿಕ ಸೌಲಭ್ಯ ದೊರೆಯುವುದಿಲ್ಲ. ಈವರೆಗೂ ಇ-ಕೆವೈಸಿ ಮಾಡಿಸದ ರೈತ ಫಲಾನುಭವಿಗಳು ತಮ್ಮ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯೊಂ ದಿಗೆ ಈ ಕೆಳಗೆ ತಿಳಿಸಿದ ವಿಧಾನಗಳಲ್ಲಿ ಯಾವುದಾದರೂ ಒಂದು ಪ್ರಕ್ರಿಯೆಯನ್ನು ಅನುಸರಿಸ ಬಹುದಾಗಿದೆ.
ಫಲಾನುಭವಿಗಳು ಸ್ವತಃ ತಾವೇ http://pmkisan.gov.in ಪಿಎಂ ಕಿಸಾನ್ ಪೋರ್ಟಲ್ ನ farmers corner ನ e-KYC ಅವಕಾಶದಡಿ ಆಧಾರ್ ಸಂಖ್ಯೆಯನ್ನು ನಂತರ ಆಧಾರ್ ಸಂಖ್ಯೆಯೊಂದಿಗೆ ಜೋಡಣೆಯಾದ ಮೊಬೈಲ್ ಸಂಖ್ಯೆಯನ್ನು ದಾಖಲಿಸಬೇಕು. ಈ ಪ್ರಕ್ರಿಯೆಯ ನಂತರ ಸ್ವೀಕೃತವಾದ ಓಟಿಪಿಯನ್ನು ದಾಖಲಿಸಿ, SUBMIT OTP ಎಂಬ ಬಟನ್ ಒತ್ತುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಇಲ್ಲವೇ ಸಮೀಪದ ಗ್ರಾಮ ಒನ್ ಕೇಂದ್ರ, ಸಾಮಾನ್ಯ ಗ್ರಾಹಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಅಥವಾ ಓಟಿಪಿ ಮೂಲಕ ಇ-ಕೆವೈಸಿ ಮಾಡಿಸಬಹುದು. ಇ-ಕೆವೈಸಿ ಮಾಡಿಸದೇ ಇರುವ ಎಲ್ಲಾ ರೈತರು ಈ ಕೂಡಲೇ ಕ್ರಮ ವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಲು ಕೋರಿದೆ