ಬ್ಯೂಟಿ ಪಾರ್ಲರ್‌ಗೆ ಆರ್ಡರ್ ಕೊಡಿಸುವುದಾಗಿ ಹೇಳಿ ಮಹಿಳೆಗೆ ದೈಹಿಕ, ಮಾನಸಿಕ ಹಿಂಸೆ

ದಾವಣಗೆರೆ, ಜೂ. 7- ಬ್ಯೂಟಿ ಪಾರ್ಲರ್‌ಗೆ ಆರ್ಡರ್ ಕೊಡಿಸುವುದಾಗಿ ಹೇಳಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ, ವಿಡಿಯೋ ಚಿತ್ರೀಕರಿಸಿ, ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಲಾಗಿದೆ ಎಂದು ಕೆ.ಟಿ.ಜೆ. ನಗರದ ವಕೀಲರೊಬ್ಬರ ಮೇಲೆ  ಮಂಗಳವಾರ ನಗರ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.

ಎಂ.ಸಿ.ಸಿ. ಎ ಬ್ಲಾಕ್‌ನಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಬ್ಯೂಟಿ ಪಾರ್ಲರ್‌ ಬಳಿ ವಕೀಲರಾದ ಪ್ರಕಾಶ್  ಬಂದು ಆರ್ಡರ್‌ಗಳನ್ನು ಕೊಡಿಸುವುದಾಗಿ ಹೇಳಿ ಸ್ನೇಹ ಬೆಳೆಸಿದ್ದರು. ನಂತರ ಕೆಟಿಜೆ ನಗರದ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ, ಖಾಸಗಿ ವಿಡಿಯೋ ಮಾಡಿದ್ದಾರೆ.

ನಾನು ವಿಚ್ಛೇದಿತೆಯಾಗಿದ್ದು, ನನ್ನ ಅಸಹಾಯಕತೆ ಅರಿತ ಪ್ರಕಾಶ್, ವೇಶ್ಯಾವಾಟಿಕೆಗೆ ಪ್ರಚೋದಿಸಿದರು. ನಾನು ನಿರಾಕರಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. 

ಬ್ಯೂಟಿ ಪಾರ್ಲರ್‌ಗೆ ನುಗ್ಗಿ  ಮನೆಯನ್ನು ಲೀಸ್‌ಗೆ ಹಾಕಿಸಿಕೊಳ್ಳಬೇಕೆಂದು ಇಟ್ಟಿದ್ದ 4 ಲಕ್ಷ ರೂಪಾಯಿ ತೆಗೆದುಕೊಂಡು ಹೋಗಿದ್ದಾರೆ. ಜಾತಿ ನಿಂದನೆ ಮಾಡಿದ್ದಾರೆ ಎಂದು ಮಹಿಳೆ ರಾಧಾ ದೂರು ನೀಡಿದ್ದಾರೆ.

error: Content is protected !!