ತಿಂಗಳ ಅಂಗಳ ಸಾಹಿತ್ಯ, ಸಾಂಸ್ಕೃತಿಕ ಬಳಗದ ವತಿಯಿಂದ ಇಂದು ಸಂಜೆ 5 ಗಂಟೆಗೆ ಹೊಂಡದ ವೃತ್ತದ ಅಪ್ಪು ಸ್ಕೂಲ್ ಪಕ್ಕದಲ್ಲಿರುವ ಪತ್ರಕರ್ತರಾದ ಶ್ರೀಮತಿ ಎ.ಬಿ. ರುದ್ರಮ್ಮ ಅವರ ನಿವಾಸದಲ್ಲಿ ಸಾಹಿತ್ಯ ಸಂಗಮ ಶೀರ್ಷಿಕೆಯಡಿ ಕವಿಗೋಷ್ಠಿ ಹಾಗೂ ಕೃತಿ ಅವಲೋಕನ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ತಿಂಗಳ ಅಂಗಳ ಬಳಗದ ಸರ್ವ ಸದಸ್ಯರಿಂದ ಕವನ ವಾಚನ ನಡೆಯಲಿದ್ದು, ನಂತರ ರುದ್ರಮ್ಮ ಅವರ `ಸುಜ್ಞಾನ ಕಿರಣ’ ಕೃತಿಯ ಕುರಿತು ಓದುಗರು ತಮ್ಮ ಅನಿಸಿಕೆ ವ್ಯಕ್ತಪಡಿಸಲಿದ್ದಾರೆ ಎಂದು ಬಳಗದ ಸಂಚಾಲಕ ಗಂಗಾಧರ ಬಿ.ಎಲ್. ನಿಟ್ಟೂರ್ ತಿಳಿಸಿದ್ದಾರೆ.
January 16, 2025