ದಾವಣಗೆರೆ, ಜೂ.1- ಬಾಡಾ ಕ್ರಾಸ್ ಬಳಿ ಮೂವರು ಯುವಕರು ವ್ಯಕ್ತಿಯೊಬ್ಬರಿಂದ ಮೊಬೈಲ್ ಹಾಗೂ ಹಣ ಕಿತ್ತುಕೊಂಡು ಪರಾರಿಯಾದ ಘಟನೆ ನಿನ್ನೆ ರಾತ್ರಿ 8 ಗಂಟೆ ಸಮಯದಲ್ಲಿ ನಡೆದಿದೆ.
ಬಾಡಾ ಕ್ರಾಸ್ ಬಳಿ ನಿಂತಿದ್ದಾಗ ಮೂವರು ಯುವಕರು ಸ್ಕೂಟಿಯಲ್ಲಿ ಬಂದು, ಇಲ್ಲಿ ನಿನ್ನೆ ಮೊನ್ನೆ ನನ್ನ ತಮ್ಮಂದಿರ ಮೊಬೈಲ್ ಕಿತ್ತುಕೊಂಡಿದ್ದಾರೆ. ಸಾಹೇಬರು ಕರೆಯುತ್ತಿದ್ದಾರೆ ಹೋಗೋಣ ಬಾ ಎಂದು ಅವರ ಸ್ಕೂಟರ್ನಲ್ಲಿ ಕೂರಿಸಿಕೊಂಡು ತೋಳಹುಣಸೆ ರಸ್ತೆ ಮೂಲಕ ಪೆಟ್ರೋಲ್ ಬಂಕ್ ಬಳಿ ಕೂರಿಸಿ, ಅಲ್ಲಿ ಜೇಬಿನಲ್ಲಿದ್ದ 500 ರೂ. ಕಸಿದುಕೊಂಡು ನಂತರ ಸ್ಕೂಟ ರ್ನಲ್ಲಿ ವಾಪಸ್ ಕರೆದುಕೊಂಡು ಅದೇ ಸ್ಥಳದಲ್ಲಿ ಬಿಟ್ಟು ಹೋಗಿದ್ದಾರೆ ಎಂದು ತ್ಯಾವಣಗಿಯ ಸಂಜು ಎಂ ಬುವವರು ಆರ್.ಎಂ.ಸಿ. ಯಾರ್ಡ್ ಠಾಣೆಯಲ್ಲಿ ದೂರು ನೀಡಿದ್ದಾರೆ.