ನ್ಯಾಮತಿ, ಮೇ 30- ಟ್ರ್ಯಾಕ್ಟರ್ ತೊಳೆಯುವಾಗ ಆಕಸ್ಮಿಕ ವಿದ್ಯುತ್ ಪ್ರವಹಿಸಿ ದರ್ಶನ್ (18) ಎಂಬ ಹುಡುಗ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಸುರಹೊನ್ನೆ ಗ್ರಾಮದ ಹೊರವಲಯದ ಐಟಿಐ ಕಾಲೇಜು ಬಳಿಯ ಮನೆಯಲ್ಲಿ ಭಾನುವಾರ ಮುಂಜಾನೆ ನಡೆದಿದೆ.
ನ್ಯಾಮತಿ ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ಒಂಭತ್ತನೆ ತರಗತಿ ಉತ್ತೀರ್ಣನಾಗಿದ್ದು, ಹತ್ತನೇ ತರಗತಿಗೆ ಹೋಗಬೇಕಿತ್ತು.
ಕೃಷಿ ಕುಟುಂಬದ ಹಿನ್ನೆಲೆ ಹೊಂದಿರುವ ಮನೆಯಲ್ಲಿ ಮನೆಯ ಬಳಿ ಬೆಳಿಗ್ಗೆ 7.30 ಸುಮಾರಿಗೆ ಟ್ರ್ಯಾಕ್ಟರ್ ತೊಳೆಯಲೆಂದು ಹೊಗಿದ್ದ ದರ್ಶನ್ ಬಹಳ ಸಮಯವಾದರೂ ಬಾರದ ಹಿನ್ನೆಲೆಯಲ್ಲಿ ತಾಯಿ ತಿಂಡಿ ತಿನ್ನಲು ಮಗನನ್ನು ಕರೆಯಲೆಂದು ಹೋಗಿದ್ದ ಸಂದರ್ಭದಲ್ಲಿ ಟ್ರ್ಯಾಕ್ಟ್ರ್ ಬಳಿ ಆತ ಬಿದ್ದಿದ್ದನ್ನು ನೋಡಿ ತಾಯಿ ಚೀರಿಕೊಂಡಿದ್ದು, ರಸ್ತೆಯಲ್ಲಿ ಹೋಗುತ್ತಿದ್ದವರು ಬಂದು ನೋಡುವಷ್ಟರಲ್ಲಿ ಯುವಕ ಮೃತ ಪಟ್ಟಿದ್ದಾನೆ.
ಟ್ರ್ಯಾಕ್ಟರ್ ತೊಳೆಯಲೆಂದು ಆನ್ ಮಾಡಿದ ಮೋಟರ್ನಿಂದಲೇ ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವುದಾಗಿ ತಾಯಿ ಶೈಲಜಾ ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 2020ರ ಕೊರೊನಾ ಸಂದರ್ಭದಲ್ಲಿ ಪತಿಯೂ ಮೃತಪಟ್ಟಿರುತ್ತಾರೆ.