ದಾವಣಗೆರೆ, ಮೇ 29- ನಿಜಲಿಂಗಪ್ಪ ಬಡಾವಣೆಯಲ್ಲಿರುವ ಶ್ರೀ ಶಾರದಾಂಬ ಸಭಾ ಭವನದಲ್ಲಿ ಶಂಕರ ಸೇವಾ ಸಂಘದ ವತಿಯಿಂದ ಈಚೆಗೆ ಉಚಿತ ಸಾಮೂಹಿಕ ಉಪನಯನ ಏರ್ಪಡಿಸ ಲಾಗಿತ್ತು. ದಾವಣಗೆರೆ ಹಾಗೂ ಪರ ಊರಿನಿಂದ ಬಂದಂತಹ ವಟುಗಳಿಗೆ ಬ್ರಹ್ಮೋಪದೇಶವನ್ನು ಉಪದೇಶಿಸಲಾಯಿತು. ವೇದಬ್ರಹ್ಮ ಶ್ರೀ ಶಂಕರನಾರಾಯಣ ಶಾಸ್ತ್ರಿಗಳ ನೈತೃತ್ವದಲ್ಲಿ ಅವರ ಶಿಷ್ಯಂದಿರುಗಳಾದ ಪುಟ್ಟಸ್ವಾಮಿ, ರಾಮಕೃಷ್ಣರಾವ್, ಜಯರಾಮ್, ನಾರಾಯಣ ಜೋಶಿ, ಪವನ್, ಹರೀಶ್ ಮುಂತಾದವರು ಬ್ರಹ್ಮೋಪದೇಶವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಶಂಕರ ಸೇವಾ ಸಂಘದ ಅಧ್ಯಕ್ಷ ಡಾ. ಬಿ. ಟಿ. ಅಚ್ಯುತ, ಕಾರ್ಯದರ್ಶಿ ಶ್ರೀನಿವಾಸ ಜೋಶಿ, ಪದಾಧಿಕಾರಿಗಳಾದ ವಿನಾಯಕ ಜೋಶಿ, ಸುಬ್ರಹ್ಮಣ್ಯ ಟಿ., ಮೋತಿ ಸುಬ್ರಮಣ್ಯ, ದೇವಸ್ಥಾನದ ಅರ್ಚಕರು, ಮ್ಯಾನೇಜರ್ ರಮೇಶ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.