ಗುರಿ ತಲುಪಲು ಶಿಸ್ತು ಬೇಕು : ದಿನೇಶ್ ಕೆ.ಶೆಟ್ಟಿ

ಗುರಿ ತಲುಪಲು ಶಿಸ್ತು ಬೇಕು : ದಿನೇಶ್ ಕೆ.ಶೆಟ್ಟಿ

ದಾವಣಗೆರೆ, ಮೇ 29 – ಜೀವನದಲ್ಲಿ ಅಂದುಕೊಂಡ ಗುರಿ ತಲುಪಲು ಪ್ರತಿಯೊಬ್ಬರಿಗೂ ಶಿಸ್ತು ಬೇಕು. ಗುರುಗಳು ತೋರಿದ ಶಿಸ್ತಿನ ದಾರಿಯನ್ನು ಹಿಡಿದು ಶ್ರದ್ಧೆ ನಿಷ್ಠೆಯಿಂದ ಪ್ರಯತ್ನ ಪಟ್ಟರೆ ಸರಿಯಾದ ಗುರಿಯನ್ನು ಬೇಗ ತಲುಪಬಹುದು ಎಂದು ದಾವಣಗೆರೆ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರು, ದಾವಣಗೆರೆ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರೂ ಆದಂತಹ ದಿನೇಶ್ ಕೆ.ಶೆಟ್ಟಿ ಕಿವಿ ಮಾತು ಹೇಳಿದರು.

ದಾವಣಗೆರೆ ಕ್ರಿಕೆಟ್ ಅಕಾಡೆಮಿ ವತಿಯಿಂದ ಹಮ್ಮಿ ಕೊಂಡಿದ್ದ 22ನೇ ವರ್ಷದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರದ ವಿದ್ಯಾ ರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಅವರು  ಮಾತನಾಡಿದರು. 

ಮೊದಲಿಗೆ ಕ್ರಿಕೆಟ್‌ಗಾಗಿ ಹೆಚ್ಚಿನ ತರಬೇತಿ ಪಡೆಯಲು ಬೆಂಗಳೂರು ಅಥವಾ ಮೈಸೂರಿಗೆ ಹೋಗಬೇಕಾಗುತ್ತಿತ್ತು. ಅದು ತುಂಬಾ ದುಬಾರಿಯಾಗಿದ್ದ ಕಾರಣ ಪೋಷಕರು ಪ್ರತಿಭಾವಂತ ಕ್ರೀಡಾಪಟುಗಳನ್ನು ಕಳಿಸಲು ಹಿಂಜರಿಯುತ್ತಿದ್ದರು, ಆದರೆ ಈಗ ದಾವಣಗೆರೆಯಲ್ಲಿ ಕ್ರೀಡಾ ಪ್ರಾಧಿಕಾರದ ಕೋಚ್ ಆದ ಪಿ.ವಿ. ನಾಗರಾಜ್‌ರವರು ಪ್ರಾರಂಭಿಸಿ, ಈಗ ಅವರ ಮಾರ್ಗದರ್ಶನದಲ್ಲಿ ಬಿಸಿಸಿಐ ಕೋಚ್ ಗೋಪಾಲಕೃಷ್ಣ, ಕೆ.ಎಸ್.ಸಿ.ಎ. ಕೋಚ್ ತಿಮ್ಮೇಶ್,  ಉಮೇಶ್ ಸಿರಿಗೆರೆ, ಕುಮಾರ್ ಅವರುಗಳ ನೇತೃತ್ವದಲ್ಲಿ ಅತ್ಯುತ್ತಮ ತರಬೇತಿ ನೀಡುತ್ತಿದ್ದು, ದಾವಣಗೆರೆಯಲ್ಲಿಯೂ ಒಳ್ಳೆಯ ಪ್ರತಿಭೆಗಳನ್ನು ತಯಾರು ಮಾಡುತ್ತಿರುವುದು ಪ್ರಶಂಸನೀಯ. ಶಿಬಿರಕ್ಕೆ ಬಂದ ಕ್ರೀಡಾಪಟುಗಳು ತರಬೇತಿಯನ್ನು ಮುಂದುವರೆಸಿಕೊಂಡು ಅತ್ಯುತ್ತಮ ಸ್ಥಾನ ತಲುಪಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಕ್ರಿಕೆಟ್ ಆಟಗಾರರಾದ ಮಂಜುನಾಥ, ಕ್ರಿಕೆಟ್ ಪ್ರೋತ್ಸಾಹಕ ಶಾಮನೂರು ತಿಪ್ಪೇಶ್, ಕಿರಿಯ ತರಬೇತುದಾರ ವೆಂಕಟೇಶ್, ಹೇಮಂತ್, ಹಿರಿಯ ಕ್ರೀಡಾಪಟುಗಳು, ಶಿಬಿರಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

error: Content is protected !!