ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ

 ದಾವಣಗೆರೆ, ಮೇ 29-    ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ 1600 ಕ್ಕೂ ಅಧಿಕ ಕಿರಿಯ ಗುಮಾಸ್ತ, ಕಿರಿಯ ಸಹಾಯಕ ಕಾರ್ಯದರ್ಶಿ ಮತ್ತು ದತ್ತಾಂಶ ನಮೂದಕ ಕಾರ್ಯನಿರ್ವಾಹಕ ಹುದ್ದೆಗಳ  ಭರ್ತಿಗಾಗಿ ಸಿಬ್ಬಂದಿ ನೇಮಕಾತಿ ಆಯೋಗದ ವತಿಯಿಂದ  ಕಂಬೈನ್ಡ್ ಹೈಯರ್ ಸೆಕೆಂಡರಿ (10+2) ಲೆವೆಲ್ ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯು ಕಂಪ್ಯೂಟರ್ ಆಧಾರಿತವಾಗಿರುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 18 ರಿಂದ 27 ವರ್ಷಗಳಾಗಿದ್ದು ನಿಯಮಾನುಸಾರ ಸಡಿಲಿಕೆ ಇರುತ್ತದೆ. ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್ https://ssc.nic.in ಅಥವಾ www.sskkr.kar.nic.in   ಮೂಲಕ ಆನ್‍ಲೈನ್‍ನಲ್ಲಿ ಜೂನ್ 8 ರೊಳಗಾಗಿ ಅರ್ಜಿ ಸಲ್ಲಿಸಬೇಕು. 

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂ: 080-25502520/ 9483862020 ಗೆ ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ  ದೂ ಸಂ: 08192-259446, 7406323294 ಸಂಪರ್ಕಿಸಬಹುದು.

error: Content is protected !!