ಜಯಲಕ್ಷ್ಮಿ ಗೆ `ರಂಗ ಚಿನ್ನಾರಿ’ ಪ್ರಶಸ್ತಿ ಪ್ರದಾನ

ಜಯಲಕ್ಷ್ಮಿ ಗೆ `ರಂಗ ಚಿನ್ನಾರಿ’ ಪ್ರಶಸ್ತಿ ಪ್ರದಾನ

ದಾವಣಗೆರೆ, ಮೇ 29 – ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿಯ ಖ್ಯಾತ ಹಿರಿಯ ಯಕ್ಷಗಾನ ವಿದ್ವಾಂಸರು, ಕನ್ನಡಪರ ಸಂಘಟಕರು, ಕೇರಳದ ಗಡಿನಾಡಿನ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ಕಾರಂತ್‍ ಅವರನ್ನು ಇತ್ತೀಚಿಗೆ ಕಾಸರಗೋಡಿನ ರಂಗ ಚಿನ್ನಾರಿ ಸಾಂಸ್ಕೃತಿಕ ಸಂಸ್ಥೆಯಿಂದ ಸಂಸ್ಥೆಯ 17ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ `ರಂಗ ಚಿನ್ನಾರಿ’ ರಾಜ್ಯ ಪ್ರಶಸ್ತಿಯೊಂದಿಗೆ ಪುರಸ್ಕರಿಸಿ ಸನ್ಮಾನಿಸಲಾಯಿತು ಎಂದು ಸಂಸ್ಥೆಯ ನಿರ್ದೇಶಕ ಕಾಸರಗೋಡು ಚಿನ್ನ ತಿಳಿಸಿದ್ದಾರೆ.

ಶ್ರೀ ಎಡೆನೀರು ಮಠದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ವಹಿಸಿಕೊಂಡಿದ್ದರು. ನೇತ್ರ ತಜ್ಞ ಡಾ|| ಅನಂತ ಕಾಮತ್ ಅಧ್ಯಕ್ಷತೆ ವಹಿಸಿಕೊಂಡಿದ್ದರು. ನ್ಯಾಯವಾದಿ ಹಾಗೂ ಶಾಸಕ ಪ್ರತಾಪ ಸಿಂಹನಾಯಕ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಮುಖ್ಯ ಅತಿಥಿಗಳಾಗಿ ನೃತ್ಯ ಕಲಾವಿದೆ ವಿದುಷಿ ಮಾನಸಿ ಸುಧೀರ್, ಹಿರಿಯ ಶಿಕ್ಷಕ ಮಾಧವ ಹೇರಳ, ಎಡೆನೀರು ಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ, ಅಂತರ ರಾಷ್ಟ್ರೀಯ ರಂಗ ಕಲಾವಿದ ಗಣೇಶ್ ಕುಂಬಳೆ, ಡಾ|| ರಮಾ ಐಯ್ಯರ್, ವಿದ್ವಾನ್ ಸುಧೀರ್‍ರಾವ್, ರಂಗ ಕಲಾವಿದ ಸುಧಾಕರ್ ಸಾಲ್ಯಾನ್, ಹಿರಿಯ ಸಾಹಿತಿ ಡಾ. ನಾ.ದಾ. ಶೆಟ್ಟಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

error: Content is protected !!