ಅಪರಿಚಿತ ಪುರುಷನ ಶವ ಪತ್ತೆ

ದಾವಣಗೆರೆ, ಮೇ 29-  ನಗರದ ಬೂದಾಳು ರಸ್ತೆಯಲ್ಲಿರುವ ಶಾದಿ ಮಹಲ್‌ ಪಕ್ಕದಲ್ಲಿ ಮೊನ್ನೆ 35-40 ವರ್ಷ ವಯಸ್ಸಿನ ಓರ್ವ ಪುರುಷನ ಶವ ಪತ್ತೆಯಾಗಿದೆ. ಗೋದಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು  ಹೊಂದಿರುತ್ತಾನೆ. ಮೃತನು ಗ್ರೇ ಬಣ್ಣದ ಟೀ ಶರ್ಟ್‌, ಕಡು ನೀಲಿ ಬಣ್ಣದ ಪ್ಯಾಂಟ್‌ ಧರಿಸಿದ್ದು, ಬಲಗೈ ಮಣಿಕಟ್ಟಿನ ಬಳಿ ಕಪ್ಪು ಬಣ್ಣದ ದಾರ ಇರುತ್ತದೆ. ಸಂಬಂಧಪಟ್ಟವರು ಗಾಂಧಿ ನಗರ ಪೊಲೀಸ್‌ ಠಾಣೆಗೆ ಸಂಪರ್ಕಿಸಬಹುದು. ವಿವರಗಳಿಗೆ ದೂರವಾಣಿ : 08192-253400, 09192-259337, 08192-272011, ಮೊ : 94808 03247.

error: Content is protected !!