ಹರಿಹರ, ಮೇ 26 – ನಗರದ ಶ್ರೀಕಾಂತ್ ಟಾಕೀಸ್ನಲ್ಲಿ `ಕೇರಳ ಸ್ಟೋರಿ’ ಚಲನಚಿತ್ರವನ್ನು ಸಾರ್ವಜನಿಕರು ಉಚಿತವಾಗಿ ವೀಕ್ಷಿಸಲು ಶಾಸಕ ಬಿ.ಪಿ. ಹರೀಶ್ ಅವಕಾಶ ಕಲ್ಪಿಸಿದ್ದರು. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಚಲನಚಿತ್ರ ವೀಕ್ಷಣೆ ಮಾಡಿದರು.
ಕೇರಳ ಸ್ಟೋರಿ ಚಲನಚಿತ್ರ ವೀಕ್ಷಣೆ ಮಾಡುವುದಕ್ಕೆ ಒಂದನೇ ತಾರೀಖಿನ ವರೆಗೆ ಅವಕಾಶ ಕಲ್ಪಿಸಿದ್ದು ವೀಕ್ಷಕರು ಸದುಪಯೋಗ ಪಡಿಸಿಕೊಳ್ಳಲು ಬಿಜೆಪಿ ಪಕ್ಷದ ಮುಖಂಡರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಚಂದ್ರಕಾಂತ, ರಾಜು ರೋಖಡೆ, ಅಣ್ಣಪ್ಪ, ಅಂಬುಜಾ ಪಿ. ರಾಜೋಳ್ಳಿ, ರೂಪಾ ಕಾಟ್ವೆ, ಪ್ರಮಿಳಾ ನಲ್ಲೂರು, ಕತ್ತಲಗೇರಿ ಶಿವಯೋಗಿ ಸ್ವಾಮಿ ಮತ್ತಿತರರು ಹಾಜರಿದ್ದರು.