ಮಲೇಬೆನ್ನೂರು, ಮೇ 26- ಕೆ. ಬೇವಿನಹಳ್ಳಿ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಕಡ್ಲೆಗೊಂದಿಯ ಕೆ. ಜಯ್ಯಪ್ಪ ಅವರು ಶುಕ್ರವಾರ ನಡೆದ ಚುನಾವಣೆ ಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಸಲಗನಹಳ್ಳಿ ವಿಜಯಕುಮಾರ್ ಅವರ ರಾಜೀನಾಮೆಯಿಂದಾಗಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ತಾ. ಸಮಾಜ ಕಲ್ಯಾಣಾಧಿಕಾರಿ ಸೈಯದ್ ನಾಜೀರುದ್ಧೀನ್ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಗಂಗಮ್ಮ ಸೇರಿದಂತೆ ಗ್ರಾ.ಪಂ.ನ ಸರ್ವ ಸದಸ್ಯರು ಮತ್ತು ಪಿಡಿಓ ಶ್ರೀಮತಿ ಲಕ್ಷ್ಮಿ ಮತ್ತಿತರರು ಈ ವೇಳೆ ಹಾಜರಿದ್ದರು.