ನಾಗನರಸನಹಳ್ಳಿಯಲ್ಲಿ ಇಂದು ರಕ್ತದಾನ ಶಿಬಿರ

ದಾವಣಗೆರೆ ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನಾ ವಿಭಾಗ ಹಾಗೂ ಸುಶೀಲಮ್ಮ ಬಂಕಾಪುರದ ಚನ್ನಬಸಪ್ಪ ಪ್ರಥಮ ದರ್ಜೆ ಮಹಿಳಾ ಕಾಲೇಜು (ಎಸ್‌.ಬಿ.ಸಿ.) ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶೇಷ ಶಿಬಿರವು ನಾಗರಸನಹಳ್ಳಿಯ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಆವರಣದಲ್ಲಿ ನಿನ್ನೆ ಆರಂಭಗೊಂಡಿದ್ದು, ಇದೇ ದಿನಾಂಕ 31 ರವರೆಗೆ ನಡೆಯಲಿದೆ.

ಇಂದು ಬೆಳಿಗ್ಗೆ 6.30 ಕ್ಕೆ ಗುರುಶಾಂತಯ್ಯ ಅವರಿಂದ ಧ್ವಜಾರೋಹಣ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ (ದಾವಣಗೆರೆ) ವತಿಯಿಂದ ರಕ್ತದಾನ ಶಿಬಿರ, ಡಾ. ಅಗರ್‌ವಾಲ್‌ ಕಣ್ಣಿನ ಆಸ್ಪತ್ರೆ (ದಾವಣಗೆರೆ) ಇವರಿಂದ ಉಚಿತ ಕಣ್ಣಿನ ಶಿಬಿರ, ಒರೆವ ಆರ್‌.ಎಸ್‌. ಆಸ್ಪತ್ರೆ (ದಾವಣಗೆರೆ) ಇವರ ಸಹಯೋಗದಲ್ಲಿ ಉಚಿತ ಕಿವಿ ತಪಾಸಣಾ ಶಿಬಿರ ನಡೆಯಲಿದೆ.

ನಂತರ ಸಂಜೆ 6 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆ : ಟಿ.ವಿ. ಮಹಾರುದ್ರಪ್ಪ, ಉಪನ್ಯಾಸ : ಡಾ. ಅನಿಲ್‌ಕುಮಾರ್ – ವಿಷಯ : ದಿನನಿತ್ಯ ಜೀವನದಲ್ಲಿ ವಿಜ್ಞಾನ ಮತ್ತು ಪರಮೇಶ್ವರ ಎನ್‌.ಎಸ್‌. – ವಿಷಯ : ಗ್ರಾಮೀಣ ಬದುಕು. ಮುಖ್ಯ ಅತಿಥಿಗಳು : ವೀರಪ್ಪ ಚಳಗೇರಿ, ಬಿ.ಸಿ. ಸಿದ್ದಪ್ಪ, ಪ್ರಭುದೇವ್‌ ಜಿ.ಇ. ಕಣ್ಣಾಳ್‌ ರುದ್ರಪ್ಪ, ಕುರುಬರ ಮಹಾದೇವಪ್ಪ.

error: Content is protected !!