ಕ್ಷಯ ಮುಕ್ತ ಗ್ರಾಮ ಮಾಡಲು ಕೈ ಜೋಡಿಸಿ : ಡಾ. ಗುರುಪ್ರಸಾದ್

ಕ್ಷಯ ಮುಕ್ತ ಗ್ರಾಮ ಮಾಡಲು ಕೈ ಜೋಡಿಸಿ : ಡಾ. ಗುರುಪ್ರಸಾದ್

ಚಳ್ಳಕೆರೆ, ಮೇ 26- ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದಡಿಯಲ್ಲಿ ಕಮ್ಯುನಿಟಿ ಎಂಗೇಜ್‌ಮೆಂಟ್ ಕಾರ್ಯಕ್ರಮವನ್ನು  ತಾಲ್ಲೂಕಿನ ಕರೀಕೆರೆ ಗ್ರಾಮದಲ್ಲಿ ಕ್ಷಯಮುಕ್ತ ಗ್ರಾಮ ಮಾಡುವ ಸಲುವಾಗಿ ಹಾಗೂ ಕ್ಷಯರೋಗದ ಬಗ್ಗೆ ಜಾಗೃತಿ, ಜನರಿಗೆ ಕ್ಷಯ ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

 ಈ ಕಾರ್ಯಕ್ರಮವನ್ನು ಉದ್ದೇಶಿಸಿ ಆಡಳಿತ ವೈದ್ಯಾಧಿಕಾರಿ  ಡಾ. ಗುರುಪ್ರಸಾದ್ ಅವರು ಕ್ಷಯ ರೋಗದ ಲಕ್ಷಣಗಳು, ಹರಡುವ ವಿಧಾನ, ಚಿಕಿತ್ಸೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಆರೋಗ್ಯ ಶಿಕ್ಷಣ ನೀಡಿ ಜನರಿಗೆ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಸಿ.ಎನ್. ನವೀನ್‌ಕುಮಾರ್, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಕೆ. ಸುಲೋಚನಾ, ಸಮುದಾಯ ಆರೋಗ್ಯ ಅಧಿಕಾರಿ ಕೆ. ಸ್ನೇಹಾ, ಆಶಾ ಕಾರ್ಯಕರ್ತರು, ಆರ್. ಭಾಗ್ಯಮ್ಮ, ಎಂ.ಟಿ. ಭಾಗ್ಯಮ್ಮ, ಗ್ರಾಮದ ಮುಖಂಡ ಈರಣ್ಣ, ಸ್ವಸಹಾಯ ಸಂಘದ ಮಹಿಳೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!