4 ತೊಲೆ ಮಾಂಗಲ್ಯ ಸರ ಕಿತ್ತು ಪರಾರಿ

ದಾವಣಗೆರೆ, ಮೇ 26- ಸಂಜೆ ವಾಯುವಿಹಾರ ಮಾಡುತ್ತಿದ್ದ ವೇಳೆ ಮಹಿಳೆಯರ ಕೊರಳಲ್ಲಿದ್ದ 40 ಗ್ರಾಂ ತೂಕದ ಸುಮಾರು 2.25 ಲಕ್ಷ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ವ್ಯಕ್ತಿಯೊಬ್ಬ  ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ.  

ಸ್ಥಳೀಯ ಶಾಮನೂರು ಡಾಲರ್ಸ್ ಕಾಲೋನಿಯ ಸೀತಮ್ಮ ಎಂಬ ಮಹಿಳೆ ನಿನ್ನೆ ಗುರುವಾರ ಸಂಜೆ ವಾಯುವಿಹಾರ ಮಾಡಿ ಡಾಲರ್ಸ್ ಕಾಲೋನಿ ಮುಖ್ಯ ರಸ್ತೆಯಲ್ಲಿ ಬರುತ್ತಿದ್ದಾಗ ಬೈಕ್‌ನಲ್ಲಿ ಎದುರುಗಡೆಯಿಂದ ಬಂದ ವ್ಯಕ್ತಿಯೊಬ್ಬ  ಮಾಂಗಲ್ಯ ಕಿತ್ತು ಪರಾರಿಯಾಗಿದ್ದಾನೆ ಎಂದು ವಿದ್ಯಾನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

error: Content is protected !!