ಮಲೇಬೆ ನ್ನೂರು, ಮೇ 25 – ಯಲವಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಜಿ. ಆಂಜನೇಯ ಮತ್ತು ಉಪಾಧ್ಯಕ್ಷರಾಗಿ ಎ. ಹನುಮಂತಪ್ಪ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಗ್ರಾಮದ ಮುಖಂಡರಾದ ಶ್ರೀಧರ್, ಕೆ. ನರಸಪ್ಪ, ಬಿ. ಸಿದ್ದೇಶ್, ಕೆ. ಮಂಜಪ್ಪ, ಡಿ. ಬಸವನಗೌಡ, ಖಲಂದರ್ ಸಾಬ್, ಮಾಕನೂರು ಹನುಮಂತಪ್ಪ, ಕೆ. ಚನ್ನಬಸಪ್ಪ ಸೇರಿದಂತೆ, ಇನ್ನೂ ಅನೇಕರು ಈ ವೇಳೆ ಹಾಜರಿದ್ದರು. ಚುನಾವಣಾಧಿಕಾರಿಯಾಗಿ ಸಹಕಾರಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುನಿತಾ ಕಾರ್ಯನಿರ್ವಹಿಸಿದರು. ಸಂಘದ ಸಿಇಓ ಶೇಖರಪ್ಪ ಸ್ವಾಗತಿಸಿ, ವಂದಿಸಿದರು.
December 26, 2024