ಹೊನ್ನಾಳಿ, ಮೇ 24- ತಾಲ್ಲೂಕಿನ ಕಮ್ಮಾರಗಟ್ಟೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಶಿವಕುಮಾರ ನಾಯ್ಕ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಎಸ್.ಡಿ. ರಮೇಶನಾಯ್ಕ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಘಂಟ್ಯಾಪುರದ ಶಿವಕುಮಾರನಾಯ್ಕ ಅವರೊಬ್ಬರೇ ಉಮೇ ದುವಾರಿಕೆ ಸಲ್ಲಿಸಿದ್ದರಿಂದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ವಿಶ್ವನಟೇಶ್ ತಿಳಿಸಿದ್ದಾರೆ.
ಶಿವಕುಮಾರ ನಾಯ್ಕ ಅವರು ಗ್ರಾಮ ಪಂಚಾಯಿತಿಗೆ ಎರಡನೇ ಬಾರಿಗೆ ಆಯ್ಕೆಯಾ ಗಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಒಟ್ಟು 10 ಜನ ಸದಸ್ಯರ ಪೈಕಿ ಚುನಾವಣೆ ಸಂದರ್ಭದಲ್ಲಿ 6 ಜನ ಸದಸ್ಯರುಗಳು ಹಾಜರಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ರಾಘವೇಂದ್ರ, ಕಾರ್ಯದರ್ಶಿ ಎನ್.ರಮೇಶ್ನಾಯ್ಕ ಹಾಜರಿದ್ದರು.