ದಾವಣಗೆರೆ, ಮೇ 22- ನಗರದ ಎಸ್.ಪಿ.ಎಸ್. ನಗರದ 1ನೇ ಹಂತ ದಲ್ಲಿರುವ ಖಾಲಿ ಮನೆ ಮುಂಭಾಗ ದಲ್ಲಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿದೆ. ಮೃತರು ಸುಮಾರು 60-65 ವರ್ಷ ವಯಸ್ಸಿನವಳು. ಗೋಧಿ ಮೈ ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿರುವ ಈಕೆ, ಹಸಿರು ಜಾಕೀಟು, ತಿಳಿ ನೀಲಿ ಬಣ್ಣದ ಹೂವಿನ ಚಿತ್ರವುಳ್ಳ ಸೀರೆ, ನೀಲಿ ಬಣ್ಣದ ಲಂಗ ಧರಿಸಿದ್ದಾಳೆ. ಬಲಗೈಯಲ್ಲಿ ಹಸಿರು ಬಣ್ಣದ ಗಾಜಿನ ಬಳೆಗಳಿವೆ. ಮೃತ ವ್ಯಕ್ತಿಗೆ ಸಂಬಂಧಿ ಸಿದವರು ಗಾಂಧಿ ನಗರ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದು. ವಿವರಕ್ಕೆ ಸಂಪರ್ಕಿಸಬೇಕಾದ ದೂರವಾಣಿ 08192-253400, 08192-259337, 08192-272011 ಮೊ: 9480803247.
January 4, 2025