ದಾವಣಗೆರೆ, ಮೇ 20- ನಗರದ ವನಿತಾ ಸಮಾಜದಿಂದ ಮಾರುತಿ ಮಂದಿರದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಗಂಗಾ ಮಕ್ಕಳ ಲೋಕದ 50ಕ್ಕೂ ಹೆಚ್ಚು ಮಕ್ಕಳಿಗೆ ಅನೇಕ ಸೇವಾ ಸಂಸ್ಥೆಗಳು ಉಚಿತವಾಗಿ ಪೆನ್ನು, ಪುಸ್ತಕ, ಬ್ಯಾಗ್ ನೀಡಿ ಪ್ರೋತ್ಸಾಹಿಸಿವೆ.
ಅಲ್ಲದೇ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಬಹುತೇಕ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿದ್ದು, ಇವರೆಲ್ಲರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಿದ ವನಿತಾ ಸಮಾಜದ ಪದಾಧಿಕಾರಿಗಳಿಗೆ ಮಕ್ಕಳ ಲೋಕದ ಸಂಸ್ಥಾಪಕ ಕೆ.ಎನ್. ಸ್ವಾಮಿ, ಪ್ರಾಚಾರ್ಯರಾದ ರುದ್ರಾಕ್ಷಿಬಾಯಿ ಪುಟ್ಟಾನಾಯ್ಕ, ಉಪ ಪ್ರಾಚಾರ್ಯರಾದ ರುಕ್ಕಾಬಾಯಿ ಕೊಂತಿಕಲ್ ಅಭಿನಂದಿಸಿದ್ದಾರೆ.