ದಾವಣಗೆರೆ, ಏ, 21- ವನಿತಾ ಸಮಾಜದ ಅಂಗ ಸಂಸ್ಥೆಯಾದ “ಆಶ್ರಯ’’ ಹಿರಿಯ ವನಿತೆಯರ ಆನಂದಧಾಮವು ನಿರಾಶ್ರಿತ ಮಹಿಳೆಯರು, ವಿಧವೆಯರು, ಅವಿವಾಹಿತರು, ಮಕ್ಕಳಿಲ್ಲದವರು, ಮಕ್ಕಳು ಇದ್ದು ಅವರನ್ನು ನೋಡಿಕೊಳ್ಳದವರು ಹಾಗೂ ಅನಾಥರು, ಅಬಲೆಯರಿಗೆ ಆಸರೆ ನೀಡುತ್ತಾ ಬಂದಿದೆ.
ಆಸಕ್ತ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ. 60 ವರ್ಷ ಮೇಲ್ಪಟ್ಟವರಾಗಿರಬೇಕು. ತಕ್ಕಮಟ್ಟಿಗೆ ಆರೋಗ್ಯವಾಗಿದ್ದು, ತಮ್ಮ ಕೆಲಸ ತಾವೇ ಮಾಡಿಕೊಳ್ಳಲು ಶಕ್ತರಾಗಿರಬೇಕು. ವಿವರಕ್ಕೆ ಸಂಪರ್ಕಿಸುವ ಮೊಬೈಲ್ ಫೋನ್ ಸಂಖ್ಯೆ : 94806 87273, 98448 50414, 98451 66724.