ಯಾವ ಖಾತೆ ಕೊಟ್ಟರೂ ನಿರೀಕ್ಷೆ ಮೀರಿ ಕೆಲಸ

ಯಾವ ಖಾತೆ ಕೊಟ್ಟರೂ ನಿರೀಕ್ಷೆ ಮೀರಿ ಕೆಲಸ - Janathavaniಪತಿ ಎಸ್ಸೆಸ್ಸೆಂ ಬಗ್ಗೆ ಪತ್ನಿ ಡಾ. ಪ್ರಭಾ ವಿಶ್ವಾಸ

ದಾವಣಗೆರೆ, ಮೇ 18- ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಯಾವ ಖಾತೆ ನೀಡಿ ದರೂ, ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸಗ ಳನ್ನು ಮಾಡಲಿದ್ದಾರೆ ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದ ಬಗ್ಗೆ ಮನೆಯಲ್ಲಿ ಇದುವರೆಗೂ ಯಾವುದೇ ಚರ್ಚೆ ನಡೆದಿಲ್ಲ. ಶಿವಶಂಕರಪ್ಪ ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ಇಬ್ಬರೂ ಕೂಡ ಈಗ ಬೆಂಗಳೂರಿನಲ್ಲಿಯೇ ಇದ್ದಾರೆ. 

ಅವರಿಗೆ ಯಾವುದೇ ಖಾತೆ ಕೊಟ್ಟರೂ ಅದನ್ನು ಮೀರಿ ಕೆಲಸ ಮಾಡುತ್ತಾರೆ. ಯಾವುದೇ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುವ ಶಕ್ತಿ ಅವರಿಗೆ ಇದೆ ಎಂದು ಹೇಳಿದರು.

ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ಇಬ್ಬರೂ ಗೆಲ್ಲುವ ನಿರೀಕ್ಷೆ ಇತ್ತು. ಜನರ ನಿರೀಕ್ಷೆಗೆ ತಕ್ಕಂತೆ ಅವರು ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸಿದ್ದಾರೆ. ಮುಂದೆಯೂ  ಮಾಡುತ್ತಾರೆ. ಇದಕ್ಕೆ ಜನರ ಆಶೀರ್ವಾದವಿದೆ ಎಂದರು.

ನಾವೂ ಕೂಡ ಈ ಬಾರಿ ಚುನಾವಣೆ ಯಲ್ಲಿ ಹೆಚ್ಚು ನಿರೀಕ್ಷೆ ಇಟ್ಟುಕೊಂಡು ಕೆಲಸ ಮಾಡಿದೆವು. ಹಾಗಾಗಿ ಒಳ್ಳೆಯ ಫಲಿತಾಂಶ ದೊರೆಯಿತು. ನಗರದ ಪ್ರತಿಷ್ಟಿತ ಬಡಾವಣೆಗಳಲ್ಲಿ ಕಾಂಗ್ರೆಸ್‌ಗೆ ನಿರೀಕ್ಷಿತ ಮತಗಳು ಆಗಿಲ್ಲ. ಆದರೆ, 2013, 2018 ಹಾಗೂ 2020ರ ವೇಳೆ ಇದ್ದಂತಹ ಬಿಜೆಪಿ ಅಲೆಯನ್ನು 2023ರಲ್ಲಿ ತಡೆದಿದ್ದೇವೆಂಬುದು ಈ ಸಲದ ಫಲಿತಾಂಶದಿಂದಲೇ ಗೊತ್ತಾಗುತ್ತದೆ ಎಂದರು.

error: Content is protected !!