ರಾಣೇಬೆನ್ನೂರು, ಮೇ 14- ತಾಲ್ಲೂಕಿನ ಕಮದೋಡ ಗ್ರಾಮದ ರೇನ್ ಬೋ ರೆಸಿಡೆನ್ಷಿಯಲ್ ಪಬ್ಲಿಕ್ ಶಾಲೆಯ ಐಸಿಎಸ್ಇ ವಿಭಾಗದ 2022-23ನೇ ಶೈಕ್ಷಣಿಕ ಸಾಲಿನ 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಸತತವಾಗಿ 12ನೇ ಬಾರಿಗೆ ಶೇ 100 ರಷ್ಟು ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 51 ವಿದ್ಯಾರ್ಥಿಗಳ ಪೈಕಿ 15 ಉನ್ನತ ಶ್ರೇಣಿ, 23 ಪ್ರಥಮ ಸ್ಥಾನ, 06 ದ್ವಿತೀಯ ಮತ್ತು 07 ತೃತೀಯ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.
ಶಾಲೆಗೆ ಪ್ರಥಮ ಲಿಖಿತ್ ಎನ್.ಎ. ಶೇ.95, ದ್ವಿತೀಯ ಸಾಗರ್ ಬಿ.ಎಸ್. ಶೇ.91.17, ತೃತೀಯ ವಿಶಾಲ್ ಬಿ.ಪಿ. ಶೇ.90.83, ನಾಲ್ಕನೇ ಸ್ಥಾನ ಪ್ರಜ್ಞಾ ವಿ. ಹೆಚ್. ಶೇ.90.33 ಹಾಗೂ ಐದನೇ ಸ್ಥಾನ ಶ್ರಿಯಾ ವೈ. ಶೇ.88 ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ. ಸುರೇಶ್ ಸಿ.ಟಿ. ಉಪಾಧ್ಯಕ್ಷೆ ಶ್ರೀಮತಿ ಲಲಿತಾ ಸುರೇಶ್, ಕಾರ್ಯದರ್ಶಿ ಮಾಲತೇಶ್ ಐ.ಕೆ., ಖಜಾಂಚಿ ನಾಗರಾಜ ಎಸ್.ಕೆ. ಹರ್ಷ ವ್ಯಕ್ತಪಡಿಸಿದ್ದಾರೆ.