ದಾವಣಗೆರೆ, ಮೇ 12- ಜಿಲ್ಲೆಯ ಸರ್ಕಾರಿ ನೌಕರರಿಗೆ ಅಕೌಂಟ್ಸ್ ಲೋಯರ್, ಹೈಯರ್ ಇಲಾಖಾ ಪರೀಕ್ಷೆಗಳಿಗೆ ಹಾಜರಾಗುವ ನೌಕರರಿಗೆ ಇದೇ ದಿನಾಂಕ 15 ರಂದು ಸಂಜೆೆ 6 ಗಂಟೆಯಿಂದ 7.30 ರವರೆಗೆ ಕೋಚಿಂಗ್ ಶಿಬಿರವನ್ನು ಪ್ರಾರಂಭ ಮಾಡಲಿದ್ದಾರೆ. ಶಿಬಿರವು ಬಿ.ಐ.ಇ.ಟಿ. ಕಾಲೇಜ್ ಬಸ್ ನಿಲ್ದಾಣದ ಎದುರು, 2ನೇ ಮುಖ್ಯರಸ್ತೆ, ಶ್ರೀ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಬ್ರಾಹ್ಮೀ ಅಕಾಡೆಮಿಯಲ್ಲಿ ನಡೆಯುವುದು. ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಖಜಾನೆ ಅಧಿಕಾರಿ ಎಂ. ಬಸವರಾಜ್ ಆಗಮಿಸುವರು. ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 9845284348, 7975268494.
January 11, 2025