ದಾವಣಗೆರೆ, ಮೇ 12- 2022-23ರಲ್ಲಿ ನಡೆದ ರಾಷ್ಟ್ರಮಟ್ಟದ ಹತ್ತನೇ ತರಗತಿಯ ಸಿ.ಬಿ.ಎಸ್.ಇ ಪರೀಕ್ಷೆಯಲ್ಲಿ ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್ಗೆ ಶೇ. 100ರಷ್ಟು ಫಲಿತಾಂಶ ಲಭಿಸಿದೆ.
ಕು. ಅದ್ವಿತಿ ಎ. ಇವರು ಶೇ. 97 ಅಂಕಗಳನ್ನು ಪಡೆದು ಶಾಲೆಗೆ ಮೊದಲಿಗರಾಗಿರುವುದು ಹೆಮ್ಮೆಯ ಸಂಗತಿ. ಪರೀಕ್ಷೆಗೆ ಹಾಜರಾದ 191 ವಿದ್ಯಾರ್ಥಿಗಳಲ್ಲಿ 94 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 78 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 19 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಶಾಲೆಗೆ ಉತ್ತಮ ಫಲಿತಾಂಶವನ್ನು ದೊರಕಿಸಿಕೊಟ್ಟ ವಿದ್ಯಾರ್ಥಿಗಳನ್ನು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಮತ್ತು ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಪ್ರಾಂಶುಪಾಲ ಕೆ. ಸೋಮಶೇಖರಪ್ಪ ಅಭಿನಂದಿಸಿದ್ದಾರೆ.