ಜಿ. ಎಂ. ಹಾಲಮ್ಮ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ. 100ರಷ್ಟು ಫಲಿತಾಂಶ

ಜಿ. ಎಂ. ಹಾಲಮ್ಮ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ. 100ರಷ್ಟು ಫಲಿತಾಂಶ - Janathavaniದಾವಣಗೆರೆ, ಮೇ 11- ನಗರದ ಜಿ.ಎಂ. ಹಾಲಮ್ಮ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು 2023ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. 

ಒಟ್ಟು 48 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 48 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ. 100ರಷ್ಟು ಫಲಿತಾಂಶ ದಾಖಲಿಸಿದ್ದಾರೆ. 13 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, 33 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿರುತ್ತಾರೆ.  ಅನನ್ಯ ಎಂ.ಸಿ, ಪ್ರಥಮ (95.04%), ಜೀವನ್ ಸಾಯಿ, ದ್ವಿತೀಯ (94.34%), ಪ್ರಿಯಾಂಕ ಬಿ.ವಿ ಮತ್ತು ಆಶಿತ ಬಿ. ಯು, ತೃತೀಯ (94.24%) ಸ್ಥಾನವನ್ನು ಪಡೆದಿದ್ದಾರೆ.

error: Content is protected !!