ಮೌನೇಶ್ವರಿ ಕಿವುಡ, ಮೂಕರ ಮಕ್ಕಳ ಶಾಲೆಗೆ 100 ಫಲಿತಾಂಶ

ದಾವಣಗೆರೆ, ಮೇ 11- 2022-23 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಗರದ ಡಿ.ಸಿ.ಎಂ. ಟೌನ್‌ಶಿಪ್‌ನಲ್ಲಿ ರುವ ಶ್ರೀ ಮೌನೇಶ್ವರಿ ಶ್ರವಣ ನ್ಯೂನತೆಯ ಮಕ್ಕಳ ವಸತಿ ಯುತ ಶಾಲೆಗೆ ಶೇ. 100 ಫಲಿತಾಂಶ ಬಂದಿದೆ.  47 ವಿದ್ಯಾರ್ಥಿ ಗಳು ಪರೀಕ್ಷೆ ಬರೆದಿದ್ದು, 35 ವಿದ್ಯಾರ್ಥಿಗಳು ಪ್ರಥಮ ದರ್ಜೆ, 12 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿ ದ್ದಾರೆ. ಶಾಲಾ ಆಡಳಿತ ಮಂಡಳಿಯವರು ಮತ್ತು ಸಿಬ್ಬಂದಿ ವರ್ಗದವರು ಈ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

error: Content is protected !!