ಎಸ್ಸೆಸ್ಸೆಲ್ಸಿ : ಅತ್ತಿಗೆರೆ ಕೇಸರಿ ವಿದ್ಯಾಸಂಸ್ಥೆಗೆ ಶೇ. 100 ಫಲಿತಾಂಶ

ದಾವಣಗೆರೆ, ಮೇ 10- ತಾಲ್ಲೂಕಿನ ಅತ್ತಿಗೆರೆ ಗ್ರಾಮದ ಶ್ರೀ ಕೇಸರಿ ವಿದ್ಯಾಸಂಸ್ಥೆಯ ಶ್ರಿ ಮಹದೇವ ಕೇಸರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ 2022-23 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ಲಭಿಸಿದೆ.

ಪರೀಕ್ಷೆಗೆ ಹಾಜರಾದ  93 ವಿದ್ಯಾರ್ಥಿಗಳ ಪೈಕಿ 49 ವಿದ್ಯಾರ್ಥಿಗಳು ವಿಶಿಷ್ಟ ದರ್ಜೆಯಲ್ಲಿ (ಶೇ. 85 ಕ್ಕಿಂತ ಹೆಚ್ಚು), 43 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, ಓರ್ವ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ಎಂ. ಆರ್. ಭೂಮಿಕ 619 ಅಂಕಗಳನ್ನು (ಶೇ. 99.04) ಪಡೆದಿದ್ದಾರೆ. ವಿಷಯವಾರು 100 ಅಂಕ ಗಳಿಸಿದ ವಿದ್ಯಾರ್ಥಿಗಳು: ಕನ್ನಡದಲ್ಲಿ 6, ಇಂಗ್ಲಿಷ್‌ನಲ್ಲಿ 1, ಹಿಂದಿಯಲ್ಲಿ 8 ಹಾಗೂ ಸಮಾಜ ವಿಜ್ಞಾನದಲ್ಲಿ ಓರ್ವ ವಿದ್ಯಾರ್ಥಿ ಉತ್ತೀರ್ಣರಾಗಿದ್ದಾರೆ. 

error: Content is protected !!