ವಿಶ್ವಸಂಸ್ಥೆಯ ಕಾರ್ಯಾಗಾರಕ್ಕೆ ನಗರ ಮೂಲದ ಕಂಪನಿ ನೇತೃತ್ವ

ವಿಶ್ವಸಂಸ್ಥೆಯ ಕಾರ್ಯಾಗಾರಕ್ಕೆ ನಗರ ಮೂಲದ ಕಂಪನಿ ನೇತೃತ್ವ - Janathavaniದಾವಣಗೆರೆ, ಮೇ 10- ಹಣಕಾಸು ಸೇವೆಗಳಲ್ಲಿ ಡಿಜಿಟಲ್ ಪರಿವರ್ತನೆ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಿಷಯ ಕುರಿತು ದಾವಣಗೆರೆ ಮೂಲದ ಬೆಂಗಳೂರಿನ ಐಡಾ ಲವ್‍ಲೇಸ್ ಸಾಫ್ಟ್ ವೇರ್ ಕಂಪನಿ ಅಡಿಯಲ್ಲಿ ಜಿನಿವಾದಲ್ಲಿರುವ ವಿಶ್ವಸಂಸ್ಥೆಯಲ್ಲಿ ವಿಷಯಾಧಾರಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ವರ್ಚ್ಯುವಲ್ ಮೂಲಕ ನಡೆದ ಈ ಕಾರ್ಯಾಗಾರದಲ್ಲಿ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಜಂಟಿ ನಿರ್ದೇಶಕರಾದ ಸ್ವಪ್ನಾಲಿ ನಾಯಕ್, ಐಡಾ ಲವ್‍ಲೇಸ್ ಸಾಫ್ಟ್‌ವೇರ್ ಕಂಪನಿ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ರಾಕೇಶ್,  ನಗರದ ಜೈನ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಬಿ.ಗಣೇಶ್, ಯುರೋ ಪ್‍ನ ಲಟ್ವಿಯನ್ ಅಕಾಡೆಮಿ ನಿರ್ದೇಶಕಿ ಡಾ.ನಿನಾ, ಬೆಂಗಳೂರಿನ ಜೈನ್ ವಿದ್ಯಾಲಯದ ಮಾಧ್ಯಮ ಮತ್ತು ಸಂವಹದ ವಿಭಾಗದ ಶುಭಾ ಶ್ರೀಕಾಂತ್, ಜರ್ಮನಿಯ ಶಿರಾ ದಾಮಿಯಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಇತ್ತೀಚೆಗೆ ವಾಷಿಂಗ್ಟನ್‍ನಲ್ಲಿ ನಡೆದ ವಿಶ್ವ ಬ್ಯಾಂಕ್ ವಾರ್ಷಿಕ
ಸಭೆಗಳಲ್ಲಿ ಭಾಗವಹಿಸಿದ್ದ ನಗರದ ಡಾ.ಎಲ್.ರಾಕೇಶ್, ಕಡಿಮೆ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಸೈಬರ್ ಸೆಕ್ಯುರಿಟಿ ಕುರಿತು ಮಹಿಳೆಯರಿಗೆ ಮಾರ್ಗದರ್ಶನ ನೀಡಿದ್ದರು.

error: Content is protected !!