ದಾವಣಗೆರೆ, ಮೇ 6 – ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ಕಚೇರಿಯಲ್ಲಿ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿಯವರು ಸಭೆ ಕರೆದು, ಅವರ ಅಧಿಕಾರ ಅವಧಿ ಮುಗಿದ ಕಾರಣ ಅವರ ಸ್ಥಾನಕ್ಕೆ ನೂತನವಾಗಿ ಆಯ್ಕೆಯಾದ ಪಿ.ಡಬ್ಲ್ಯೂ.ಡಿ. ಇಲಾಖೆಯ ಕಚೇರಿ ಅಧೀಕ್ಷಕ ವೀರೇಶ್ ಎಸ್. ಒಡೆನಪುರ ಅವರಿಗೆ ಬಿ.ಪಾಲಾಕ್ಷಿ ಅವರು ಹೂ ಗುಚ್ಚ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಗುರುಮೂರ್ತಿ ಸಿ, ಜಿಲ್ಲಾ ಖಜಾಂಚಿ ಬಿ.ಆರ್. ತಿಪ್ಪೇಸ್ವಾಮಿ, ಪ್ರಭಾರಿ ರಾಜ್ಯ ಪರಿಷತ್ ಸದಸ್ಯ ಲೋಕಣ್ಣ ಮಾಗೋಡ್ರು, ಗೌರವಾಧ್ಯಕ್ಷ ಡಾ. ಉಮೇಶ್ ಬಿ, ಜಗಳೂರು ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಬಿ.ಆರ್.ಚಂದ್ರಪ್ಪ ಹಾಗೂ ಇತರರು ಉಪಸ್ಥಿತರಿದ್ದರು.