ಮತದಾನ ಮಾಡಿ ಅಳಿಸಲಾಗದ ಶಾಯಿಯೊಂದಿಗೆ ಅತ್ಯುತ್ತಮ ಸೆಲ್ಫಿ ಕಳುಹಿಸಿದವರಿಗೆ ಬಹುಮಾನ…
ದಾವಣಗೆರೆ, ಮೇ 5- ರಾಜ್ಯ ವಿಧಾನಸಭೆಗೆ ಮೇ 10 ರಂದು ನಡೆಯುವ ಮತದಾನದಲ್ಲಿ ಕುಟುಂಬ, ಸ್ನೇಹಿತರೊಂದಿಗೆ ಮತದಾನ ಮಾಡಿ, ಅಳಿಸಲಾಗದ ಶಾಯಿ ಗುರುತಿರುವ ತೋರು ಬೆರಳು ತೋರಿಸಿರುವ ಉತ್ತಮ ಸೆಲ್ಫಿ ಕಳುಹಿಸಿದವರಿಗೆ ಬಹುಮಾನ ವಿತರಿಸಲಾಗುವುದು ಎಂದು ಜಿ. ಪಂ. ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಇಟ್ನಾಳ್ ತಿಳಿಸಿದ್ದಾರೆ.
ಸೆಲ್ಫಿ ಕಳುಹಿಸಬೇಕಾದ ಮೊಬೈಲ್ ಸಂಖ್ಯೆ 103-ಜಗಳೂರು ವಿಧಾನಸಭಾ ಕ್ಷೇತ್ರದ ಮತದಾರರು ಮೊ.ನಂ 9743666064, 105-ಹರಿಹರ ವಿಧಾನಸಭಾ ಕ್ಷೇತ್ರದ ಮತದಾರರು ಮೊ.ನಂ-7353880396, 106-ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಮತದಾರರು ಮೊ.ನಂ 9535848675, 107-ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರು ಮೊ.ನಂ 8553779938, 108-ಮಾಯಕೊಂಡ ವಿಧಾನಸಭಾ ಕ್ಷೇತ್ರದ ಮತದಾರರು ಮೊ.ನಂ 9886266610, 109-ಚನ್ನಗಿರಿ ವಿಧಾನಸಭಾ ಕ್ಷೇತ್ರದ ಮತದಾರರು ಮೊ.ನಂ 9164650505 ಹಾಗೂ 110-ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಮತದಾರರು ಮೊ.ನಂ 9980300209 ಗೆ ಮತದಾರರು ತಮ್ಮ ಹೆಸರು ಹಾಗೂ ವಿಳಾಸದೊಂದಿಗೆ ತಮಗೆ ಸಂಬಂಧಿಸಿದ ವಿಧಾನಸಭಾ ಕ್ಷೇತ್ರಕ್ಕೆ ನೀಡಲಾಗಿರುವ ಮೊಬೈಲ್ ಸಂಖ್ಯೆಗೆ ಫೋಟೋ ವಾಟ್ಸ್ ಆಪ್ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.